varthabharthi

ಕರ್ನಾಟಕ

ಮುಂಬೈನಿಂದ ಸ್ಪೀಡ್ ಪೋಸ್ಟ್ ಮೂಲಕ ರಾಜೀನಾಮೆ ಪತ್ರ ರವಾನೆ

ವಾರ್ತಾ ಭಾರತಿ : 10 Jul, 2019

ಮುಂಬೈ,ಜು.10:ರಾಜೀನಾಮೆ ಕ್ರಮಬದ್ಧವಾಗಿ ಸಲ್ಲಿಸದ ಕಾಂಗ್ರೆಸ್ –ಜೆಡಿಎಸ್ ನ  ಅತೃಪ್ತ ಶಾಸಕರು ಮುಂಬೈನಿಂದಲೇ ಸ್ಪೀಡ್  ಪೋಸ್ಟ್ ಮೂಲಕ ವಿಧಾನಸಭೆಯ ಸ್ಪೀಕರ್ ಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಈಗಾಗಲೇ 13 ಮಂದಿ ಶಾಕರು ರಾಜೀನಾಮೆ ಸಲ್ಲಿಸಿದ್ದರೂ, 8 ಮಂದಿಯ ರಾಜೀನಾಮೆ ಅಂಗೀಕಾರವಾಗಿಲ್ಲ. ಬೆಂಗಳೂರಿಗೆ ಮತ್ತೆ ರಾಜೀನಾಮೆ ಸಲ್ಲಿಸಲು ಬಂದರೆ ಮನವೊಲಿಕೆಗೆ ಕಾಂಗ್ರೆಸ್ ನಾಯಕರು ಮುಂದಾಗುತ್ತಾರೆ ಎಂಬ ಕಾರಣಕ್ಕಾಗಿ ಕೆಲವು ಅತೃಪ್ತ ಶಾಸಕರು ಮುಂಬೈನಿಂದಲೇ ಸ್ಪೀಡ್​ ಪೋಸ್ಟ್​ ಮೂಲಕ ರಾಜೀನಾಮೆ ಪತ್ರ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)