varthabharthi

ಕ್ರೀಡೆ

ಸೆಮಿಫೈನಲ್: ಭಾರತಕ್ಕೆ 240 ರನ್ ಗುರಿ ನೀಡಿದ ನ್ಯೂಝಿಲ್ಯಾಂಡ್

ವಾರ್ತಾ ಭಾರತಿ : 10 Jul, 2019

ಮಾಂಚೆಸ್ಟರ್ , ಜು.10: ವಿಶ್ವಕಪ್ ಸೆಮಿಫೈನಲ್ ನಲ್ಲಿ   ನ್ಯೂಝಿಲ್ಯಾಂಡ್ ವಿರುದ್ಧ ಭಾರತ ಗೆಲುವಿಗೆ   240 ರನ್ ಗಳಿಸಬೇಕಾಗಿದೆ.
ನ್ಯೂಝಿಲ್ಯಾಂಡ್  ಇಂದು  ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 239 ರನ್ ಗಳಿಸಿದೆ.
ಮಂಗಳವಾರ ಮಳೆಯಿಂದಾಗಿ ಆಟ ನಿಂತಾಗ ನ್ಯೂಝಿಲ್ಯಾಂಡ್ 46.1 ಓವರ್ ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 211 ರನ್ ಗಳಿಸಿತ್ತು. ಈ ಮೊತ್ತಕ್ಕೆ ನ್ಯೂಝಿಲ್ಯಾಂಡ್  28 ರನ್ ಸೇರಿಸಿದೆ.
ನಿನ್ನೆ 67 ರನ್ ಗಳಿಸಿ ಔಟಾಗದೆ ಉಳಿದಿದ್ದ ರಾಸ್ ಟೇಲರ್ ಆಟ ಮುಂದುವರಿಸಿ ತನ್ನ ಸ್ಕೋರ್ ನ್ನು 74ಕ್ಕೆ ಏರಿಸಿ ಔಟಾಗಿದ್ದಾರೆ.  ಟಾಮ್ ಲಥಾಮ್ 10 ರನ್ ಮತ್ತು ಮ್ಯಾಟ್ ಹೆನ್ರಿ 1 ರನ್ ಗಳಿಸಿ  ಔಟಾದರು. ಮಿಚೆಲ್ ಸ್ಯಾಂಟ್ನೆರ್ ಔಟಾಗದೆ 9 ರನ್ ಗಳಿಸಿದರು.
ಭಾರತದ ಪರ ಭುವನೇಶ್ವರ್ ಕುಮಾರ್ 43ಕ್ಕೆ 3 ವಿಕೆಟ್, ಬುಮ್ರಾ, ಪಾಂಡ್ಯ, ಜಡೇಜ ಮತ್ತು ಚಹಾಲ್  ತಲಾ 1 ವಿಕೆಟ್ ಹಂಚಿಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್ ವಿವರ
ನ್ಯೂಝಿಲ್ಯಾಂಡ್ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 239 ರನ್( ಟೇಲರ್ 74, ವಿಲಿಯಮ್ಸನ್ 67, ನಿಕೊಲ್ಸ್ 28; ಭುವನೇಶ್ವರ್ ಕುಮಾರ್ 43ಕ್ಕೆ 3)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)