varthabharthi

ರಾಷ್ಟ್ರೀಯ

“ರಾಜ್ಯದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರಿದ್ದಾರೆ”

ಕರ್ನಾಟಕಕ್ಕೂ ಎನ್‍ ಆರ್ ಸಿ ವಿಸ್ತರಿಸಿ: ಕೇಂದ್ರಕ್ಕೆ ತೇಜಸ್ವಿ ಸೂರ್ಯ ಆಗ್ರಹ

ವಾರ್ತಾ ಭಾರತಿ : 10 Jul, 2019

ಹೊಸದಿಲ್ಲಿ, ಜು.10: ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಝನ್ಸ್ ಅನ್ನು ರಾಜ್ಯಕ್ಕೂ ವಿಸ್ತರಿಸಬೇಕೆಂದು ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ಶೂನ್ಯ ವೇಳೆಯ ಸಂದರ್ಭ ಮಾತನಾಡಿದ ತೇಜಸ್ವಿ ಸೂರ್ಯ, ಕರ್ನಾಟಕದಲ್ಲಿ ಮುಖ್ಯವಾಗಿ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯ ಅಕ್ರಮ ಬಾಂಗ್ಲಾದೇಶಿ ವಲಸಿಗರಿದ್ದಾರೆಂದು ಹೇಳಿದ್ದಾರೆ.

“ಈ ಅಕ್ರಮ ವಲಸಿಗರು ಸುರಕ್ಷತೆಗೆ ಅಪಾಯವೊಡ್ಡುತ್ತಿರುವ ಹೊರತಾಗಿ ಸ್ಥಳೀಯರ ಉದ್ಯೋಗಾವಕಾಶಗಳನ್ನೂ ಇವರು ಕಸಿಯುತ್ತಿದ್ದಾರೆ'' ಎಂದು ಸೂರ್ಯ ವಿವರಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)