varthabharthi

ಬೆಂಗಳೂರು

'ನಾನು ಅವರ ಜೊತೆ ಮಾತನಾಡಿದ್ದೇನೆ': ಶಾಸಕ ಸುಧಾಕರ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ

ವಾರ್ತಾ ಭಾರತಿ : 10 Jul, 2019

ಬೆಂಗಳೂರು, ಜು.10: ಬಿಜೆಪಿಗರು ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿಗಳು ಎನ್ನುವುದು ನಮಗೆ ಗೊತ್ತಿದೆ. ಬಿಜೆಪಿ ನಾಯಕರು, ಕಾರ್ಯಕರ್ತರು ರೌಡಿಗಳು, ಗೂಂಡಾಗಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಶಾಸಕ ಸುಧಾಕರ್ ಜೊತೆ ನಾನು ಮಾತನಾಡಿದ್ದೇನೆ. ನನ್ನ ಜೊತೆ ವೈಯಕ್ತಿಕವಾಗಿ ಮಾತನಾಡುತ್ತೇನೆ ಎಂದವರು ಹೇಳಿದ್ದಾರೆ. ನಾವು ಸುಧಾಕರ್ ರನ್ನು ಬಲವಂತವಾಗಿ ಕರೆದುಕೊಂಡು ಹೋಗಿಲ್ಲ. ಅವರು ನಮ್ಮ ಸ್ನೇಹಿತರು ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ಶಾಸಕರನ್ನು ನಾವು ರಕ್ಷಿಸುತ್ತೇವೆ. ಶಾಸಕರನ್ನು ರಕ್ಷಿಸಲು ಬಿಜೆಪಿಯವರು ಯಾರು?, ಬಿಜೆಪಿಯವರು ಸಿಬಿಐ, ಈಡಿ ಮೂಲಕ ಶಾಸಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ರಾಜಿನಾಮೆ ನೀಡಿದವರೆಲ್ಲಾ ನನ್ನ ಆಪ್ತರೇ, ಸರಕಾರ ಉಳಿಯುತ್ತದೆ ಎಂದವರು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)