varthabharthi


ಕರ್ನಾಟಕ

ಸರಕಾರ ನಡೆಸಲು ಬಿಜೆಪಿಗೆ ಅವಕಾಶ ನೀಡಿ: ಕೆ.ಬಿ.ಕೋಳಿವಾಡ

ವಾರ್ತಾ ಭಾರತಿ : 10 Jul, 2019

ಹಾವೇರಿ, ಜು.10: ಜೆಡಿಎಸ್‌ನೊಂದಿಗಿನ ಮೈತ್ರಿಯಿಂದ ಕಾಂಗ್ರೆಸ್ ಹೊರಗೆ ಬಂದು, ಬಿಜೆಪಿಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಡುವುದೆ ಉತ್ತಮವೆಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅಭಿಪ್ರಾಯಿಸಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿನ ರಾಜಕೀಯ ಪರಿಸ್ಥಿತಿ ನೋಡಿ ನೋವಾಗುತ್ತಿದೆ. ಶಾಸಕರು ಕೊಟ್ಟ ನಾಮಪತ್ರ ಅಂಗೀಕಾರ ಆಗಬೇಕಿತ್ತು. ಒಂದೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೂ ಮಧ್ಯಂತರ ಚುನಾವಣೆ ನಿಶ್ಚಿತ ಎಂದು ಭವಿಷ್ಯ ನುಡಿದರು.

ಸರಕಾರದ ಆಡಳಿತ ವೈಖರಿ ಹಾಗೂ ಭಿನ್ನಾಭಿಪ್ರಾಯಗಳಿಂದ ಯಾವ ಸರಕಾರವಾದರೂ ಪತನವಾಗುತ್ತದೆ. ಈಗಾಗಲೆ 14 ಜನ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಕೊಟ್ಟ ನಾಮಪತ್ರ ಅಂಗೀಕಾರ ಆಗಬೇಕಿತ್ತು. ಇವರು ಸ್ವ-ಇಚ್ಛೆಯಿಂದ ಕೊಟ್ಟಿದ್ದಾರೋ ಅಥವಾ ಯಾರಾದರು ಒತ್ತಡ ಹಾಕಿದ್ದಾರೆಯೆ ಎಂಬುದನ್ನಷ್ಟೆ ಖಚಿತಪಡಿಸಿಕೊಳ್ಳಬೇಕು. ಅದರ ಹೊರತಾಗಿ ಸ್ಪೀಕರ್ ರಮೇಶ್‌ಕುಮಾರ್ ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಜನ ಸರಕಾರದ ಎಲ್ಲ ಆಟಗಳನ್ನು ನೋಡುತ್ತಿದ್ದಾರೆ. ಅವರು ಯಾವ ಸಮಯದಲ್ಲಿ ನಾಯಕರಿಗೆ ಬುದ್ಧಿ ಕಲಿಸುತ್ತಾರೋ ಗೊತ್ತಿಲ್ಲ. ಶಾಸಕ ಬಿ.ಸಿ.ಪಾಟೀಲ್ ಸರಕಾರದ ನಡೆಗೆ ನೊಂದು-ನೊಂದು ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಸೂಕ್ತವಾಗಿದೆ ಎಂದು ಅವರ ಪರವಾಗಿ ಮಾತನಾಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)