varthabharthi

ಗಲ್ಫ್ ಸುದ್ದಿ

ಕೆಸಿಎಫ್ ಬಹರೈನ್ ನೂತನ ಪದಾಧಿಕಾರಿಗಳ ಆಯ್ಕೆ

ವಾರ್ತಾ ಭಾರತಿ : 10 Jul, 2019

ಬಹರೈನ್, ಜು.10: ಕರ್ನಾಟಕ ಕಲ್ಚರಲ್ ಫೌಂಡೇಶನ್ ಬಹರೈನ್ ಇದರ 2019 -20 ನೇ ಸಾಲಿನ ಮಹಾಸಭೆಯು ಇತ್ತೀಚೆಗೆ ಬಹರೈನ್ ನ ಸಗಯ್ಯ ಪಾರ್ಟಿ ಹಾಲ್ ನಲ್ಲಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಫಾರೂಕ್ ಎಸ್ಎಂ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಜೀದ್ ಸಅದಿ ಉಸ್ತಾದ್ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು. ಐಎನ್ಸಿ ಪ್ರತಿನಿಧಿ ಅಲಿ ಮುಸ್ಲಿಯಾರ್ ಉದ್ಘಾಟಿಸಿದರು. ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ವಾಚಿಸಿದರು. ವಾರ್ಷಿಕ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಅಝೀಝ್ ಸುಳ್ಯ ರವರು ಮಂಡಿಸಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಫಾರೂಕ್ ಎಸ್ಎಂ ಅಧ್ಯಕ್ಷೀಯ ಭಾಷಣ ಮಾಡಿದರು.

ಬಳಿಕ 2019-20ನೇ ಸಾಲಿನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿ ಡಾ.ಶೈಕ್ ಬಾವ ಚಾಲನೆ ನೀಡಿದರು.

ನೂತನ ಸಮಿತಿಯ ಅಧ್ಯಕ್ಷರಾಗಿ ಜಮಾಲುದ್ದೀನ್ ವಿಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ಹಾರಿಸ್ ಸಂಪ್ಯ ಪುನರಾಯ್ಕೆ ಯಾದರು. ಕೋಶಾಧಿಕಾರಿಯಾಗಿ ಇಕ್ಬಾಲ್ ಮಂಜನಾಡಿ ಅವರನ್ನು ಆಯ್ಕೆಮಾಡಲಾಯಿತು.

ಸಂಘಟನಾ ಇಲಾಖೆ ಅಧ್ಯಕ್ಷರಾಗಿ ಸಮದ್ ಉಜಿರೆಬೆಟ್ಟು, ಕಾರ್ಯದರ್ಶಿಯಾಗಿ ಸೂಫಿ ಪಯಂಬಚಾಲ್, ಶಿಕ್ಷಣ ಇಲಾಖೆ ಅಧ್ಯಕ್ಷರಾಗಿ ಕಲಂದರ್ ಮುಸ್ಲಿಯಾರ್ ಕಕ್ಕೆಪದವು, ಕಾರ್ಯದರ್ಶಿಯಾಗಿ ಮನ್ಸೂರ್ ಬೆಳ್ಮ, ವೆಲ್ಫೇರ್ ಇಲಾಖೆ ಅಧ್ಯಕ್ಷರಾಗಿ ಕರೀಂ ಉಚ್ಚಿಲ್, ಕಾರ್ಯದರ್ಶಿಯಾಗಿ ಹನೀಫ್ ಜಿಕೆ,  ಆಡಳಿತ ಇಲಾಖೆ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಸುಳ್ಯ, ಕಾರ್ಯದರ್ಶಿಯಾಗಿ ಸವಾದ್ ಉಳ್ಳಾಲ, ಇಹ್ಸಾನ್ ಇಲಾಖೆ ಅಧ್ಯಕ್ಷರಾಗಿ ಮಜೀದ್ ಮಾದಾಪುರ, ಕಾರ್ಯದರ್ಶಿಯಾಗಿ ಹನೀಫ್ ಕಿನ್ಯ, ಪಬ್ಲಿಕೇಷನ್ ವಿಭಾಗ ಅಧ್ಯಕ್ಷರಾಗಿ ಲತೀಫ್ ಪೇರೋಳಿ, ಕಾರ್ಯದರ್ಶಿಯಾಗಿ ತೌಫೀಕ್ ಬೆಳ್ತಂಗಡಿ, ಐ ಟೀಂ ಮತ್ತು ಸನ್ನದ್ದ ಸೇನೆಯ ನಾಯಕನಾಗಿ ರಿಯಾಜ್ ಸುಳ್ಯ ಮತ್ತು ಕಾರ್ಯಕಾರಿ ಸಮಿತಿಗೆ ಹತ್ತು ಸದಸ್ಯರನ್ನು ನೇಮಿಸಲಾಯಿತು. ಐಎನ್ಸಿ ಬಹರೈನ್ ಪ್ರತಿನಿಧಿಗಳಾಗಿ ಅಲಿ ಮುಸ್ಲಿಯಾರ್, ಫಾರೂಕ್ ಎಸ್.ಎಂ ಹಾಗೂ ಬಶೀರ್ ಕಾರ್ಲೆ ರವರನ್ನು ನೇಮಕ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಫೈನಾನ್ಸ್ ಕಂಟ್ರೋಲರ್ ಡಾ.ಶೈಕ್ ಬಾವಾ ಹಾಗೂ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಐಎನ್ಸಿ ಕೌನ್ಸಿಲ್  ಫೈಸಲ್ ಕೃಷ್ಣಾಪುರ, ಡಿಕೆಎಸ್ಸಿ ಬಹರೈನ್ ಅಧ್ಯಕ್ಷ ಮಜೀದ್ ಸಅದಿ ಉಸ್ತಾದರು ಭಾಗವಹಿಸಿದ್ದರು.

ನೂತನ ಸಮಿತಿಯ ಅಧ್ಯಕ್ಷ ಜಮಾಲುದ್ದೀನ್ ವಿಟ್ಲ ಮಾತನಾಡಿದರು. ಕಾರ್ಯಕ್ರಮವನ್ನು ಆಡಳಿತ ವಿಭಾಗದ ಚೆಯರ್ಮನ್ ಬಷೀರ್ ಕಾರ್ಲೆ ನಿರೂಪಿಸಿದರು. ಸಂಘಟನಾ ವಿಭಾಗದ ಕಾರ್ಯದರ್ಶಿ ಸಮದ್ ಉಜಿರೆಬೆಟ್ಟು ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ಧನ್ಯವಾದ ಸಮರ್ಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)