varthabharthi

ಕ್ರೀಡೆ

ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್

2ನೇ ದಿನ ಭಾರತಕ್ಕೆ ಏಳು ಚಿನ್ನ

ವಾರ್ತಾ ಭಾರತಿ : 11 Jul, 2019

ಅಪಿಯಾ(ಸಮೊಯಾ), ಜು.10: ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ದಿನವಾದ ಬುಧವಾರ ಭಾರತೀಯ ವೇಟ್‌ಲಿಫ್ಟರ್‌ಗಳು ಉತ್ತಮ ಪ್ರದರ್ಶನ ಮುಂದುವರಿಸಿದ್ದು ಸೀನಿಯರ್ ಮಹಿಳೆಯರ ವಿಭಾಗದಲ್ಲಿ ರಾಖಿ ಹಲ್ದರ್ ಹಾಗೂ ದವಿಂದರ್ ಕೌರ್ ತಲಾ ಒಂದು ಚಿನ್ನದ ಪದಕ ಜಯಿಸಿದ್ದಾರೆ.

ಭಾರತ ಜೂನಿಯರ್ ಹಾಗೂ ಯೂತ್ ವಿಭಾಗದಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ. ಯೂತ್, ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ಏಕಕಾಲದಲ್ಲಿ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ನಡೆಯುತ್ತಿದೆ. ಕೌರ್ ಒಟ್ಟು 184 ಕೆಜಿ(80+104)ತೂಕ ಎತ್ತಿ ಹಿಡಿದು ಮಹಿಳೆಯರ 59 ಕೆಜಿ ವಿಭಾಗದಲ್ಲಿ ಚಿನ್ನ ಜಯಿಸಿದರು. ಹಲ್ದರ್ 64ಕೆಜಿ ವಿಭಾಗದಲ್ಲಿ ಒಟ್ಟು 214ಕೆಜಿ(94+120)ತೂಕ ಎತ್ತಿ ಹಿಡಿಯುವುದರೊಂದಿಗೆ ಚಿನ್ನದ ಪದಕ ಜಯಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)