varthabharthi

ಕರಾವಳಿ

ವಿಟ್ಲ: ಶೌಚಾಲಯದ ಗುಂಡಿಗೆ ಬಿದ್ದು ಯುವಕ ಮೃತ್ಯು

ವಾರ್ತಾ ಭಾರತಿ : 11 Jul, 2019

ಬಂಟ್ವಾಳ, ಜು. 11: ಶೌಚಾಲಯದ ಗುಂಡಿಗೆ ಆಕಸ್ಮಿಕವಾಗಿ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ವಿಟ್ಲ ಸಮೀಪದ ನೆಟ್ಲಮುಡ್ನೂರು ಗ್ರಾಮದಲ್ಲಿ ಗುರುವಾರ ನಡೆದಿದೆ.

ಕೆದಿಲ ಗ್ರಾಮದ ಕಲ್ಲರ್ಪೆ ನಿವಾಸಿ ರಾಜೇಶ್ (30) ಮೃತರು ಎಂದು ಗುರುತಿಸಲಾಗಿದೆ.

ರಾಜೇಶ್ ಅವರು ಜೆಸಿಬಿ ಆಪರೇಟರ್ ಆಗಿದ್ದು, ನೆಟ್ಲ ಮುಡ್ನೂರು ಗ್ರಾಮದ ಪೆರ್ಲೊಟ್ಟು ಎಂಬಲ್ಲಿನ ಸೈಟ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಜಾಗವೊಂದನ್ನು ಜೆಸಿಬಿ ಮೂಲಕ ಸಮತಟ್ಟು ಮಾಡಿದ್ದು, ಇದೇ ಸ್ಥಳದಲ್ಲಿದ್ದ ಶೌಚಾಲಯದ ಗುಂಡಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)