varthabharthi

ಕರ್ನಾಟಕ

ನಾವಿನ್ನೂ ಕಾಂಗ್ರೆಸ್ ನಲ್ಲೇ ಇದ್ದೇವೆ : ಭೈರತಿ ಬಸವರಾಜ್

ವಾರ್ತಾ ಭಾರತಿ : 11 Jul, 2019

ಮುಂಬೈ, ಜು.11: ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ  ಕೊಟ್ಟಿದ್ದೇವೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಸುಪ್ರೀಂ ಕೋರ್ಟ್ ನ ನಿರ್ದೇಶನದ ಮೇರೆಗೆ ನಾವು ಸ್ಪೀಕರ್  ರಮೇಶ್ ಕುಮಾರ್ ನ್ನು ಭೇಟಿಯಾಗಲು ಬೆಂಗಳೂರಿಗೆ ತೆರಳುತ್ತಿದ್ದೇವೆ ಎಂದು ಅತೃಪ್ತ ಶಾಸಕ ಬಂದ ಭೈರತಿ ಬಸವರಾಜ್ ತಿಳಿಸಿದ್ದಾರೆ.

ಬೆಂಗಳೂರಿಗೆ ಹೊರಡುವ ಮುನ್ನ ಮುಂಬೈನ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾವು ಮತ್ತೆ ರಾಜೀನಾಮೆ ಸಲ್ಲಿಸಲು ಸ್ಪೀಕರ್ ಬಳಿ ತೆರಳುತ್ತೇವೆ. ನಮ್ಮ ರಾಜೀನಾಮೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.

ನಾವ್ಯಾರು ಬಿಜೆಪಿಯವರ ಸಂಪರ್ಕದಲ್ಲಿ ಇಲ್ಲ.  ನಮಗೆ ರಕ್ಷಣೆ ನೀಡುವಂತೆ ಸರಕಾರಕ್ಕೆ ಕೇಳಿಕೊಂಡಿದ್ದೇವೆ ಎಂದು ಬಸವರಾಜ್ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)