ಉಡುಪಿ: ಜು.12ರಂದು ಎಸ್ಪಿ ಫೋನ್ ಇನ್
ಉಡುಪಿ, ಜು.11: ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರಿಂದ ನೇರ ಫೋನ್ - ಇನ್ ಕಾರ್ಯಕ್ರಮವನ್ನು ಜು.12ರಂದು ಬೆಳಗ್ಗೆ 10ಗಂಟೆಯಿಂದ 11ಗಂಟೆಯವರೆಗೆ ಉಡುಪಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ಸ್ಥಿರ ದೂರವಾಣಿ ಸಂಖ್ಯೆ:0820-2534777ಕ್ಕೆ ಕರೆ ಮಾಡಿ ತಮ್ಮ ಅಹವಾಲುಗಳನ್ನು ತಿಳಿಸಬಹುದು ಅಥವಾ ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ನೀಡಬಹುದು. ಕರೆ ಮಾಡಿದವರ ವಿವರವನ್ನು ಗುಪ್ತವಾಗಿ ಇಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Next Story