varthabharthi

ಕರಾವಳಿ

ಜು.14: ಪ್ರತಿಭಾ ಪುರಸ್ಕಾರ- ಪ್ರಮಾಣಪತ್ರ ವಿತರಣೆ

ವಾರ್ತಾ ಭಾರತಿ : 11 Jul, 2019

ಉಡುಪಿ, ಜು.11: ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ಇದರ 2017-18ನೆ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಮಟ್ಟದ ರ್ಯಾಂಕ್ ಪಡೆದ ಉಡುಪಿ ಜಿಲ್ಲೆಯ 14 ಮಂದಿ ಪ್ರತಿಭಾನ್ವಿತರಿಗೆ ಪುರಸ್ಕಾರ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭವು ಜು.14ರಂದು ಮಧ್ಯಾಹ್ನ 2.30ಕ್ಕೆ ಉಡುಪಿ ಜಾಮಿಯಾ ವುಸೀದಿಯ ಸಭಾಭವನದಲ್ಲಿ ಜರಗಲಿದೆ.

 ಈ ಸಂದರ್ಭದಲ್ಲಿ ‘ತರಗತಿಗಳ ಆಚೆ: ಶಿಕ್ಷಣದಲ್ಲಿ ನೈತಿಕತೆ’ ಎಂಬ ವಿಷಯದ ಕುರಿತು ಚರ್ಚಾಕೂಟ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಣಿಪಾಲ ಎಂಐಟಿಯ ಡಾ.ಅಬ್ದುಲ್ ಅಝೀಝ್, ಬೆಂಗಳೂರು ಶಾಂತಿ ಪ್ರಕಾಶನದ ಟ್ರಸ್ಟಿ ಸಮೀನಾ ಅಫ್ಶಾನ್, ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ಜಮಿಲಾ ಹೂಡೆ ಭಾಗವಹಿಸಲಿರು ವರು ಎಂದು ಪ್ರಕಟಣೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)