varthabharthi

ಕರಾವಳಿ

ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ

ವಾರ್ತಾ ಭಾರತಿ : 11 Jul, 2019

ಬ್ರಹ್ಮಾವರ, ಜು.11: ಹಾರಾಡಿ ಗ್ರಾಮದ ಹೊನ್ನಾಳ ನಿವಾಸಿ ಅಬ್ದುಲ್ ಹಮೀದ್(53) ಎಂಬವರು ಎರಡು ತಿಂಗಳ ಹಿಂದೆ ಕುಂದಾಪುರ ಕಡೆಗೆ ಕೆಲಸಕ್ಕೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು: ಉದ್ಯಾವರ ಮೀನು ಮಾರುಕಟ್ಟೆ ಬಳಿಯ ನಿವಾಸಿ ತೀರ್ಥರಾಜ್ ಸಾಲ್ಯಾನ್ (59) ಎಂಬವರು ಜು.9ರಂದು ಮಧ್ಯಾಹ್ನ ವೇಳೆ ಉಡುಪಿಗೆ ಹೋಗಿದ್ದು ಸಂಜೆ ಮಣಿಪಾಲಕ್ಕೆ ಹೋಗುವುದಾಗಿ ಹೇಳಿ ಕರೆ ಮಾಡಿದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)