varthabharthiಅಂತಾರಾಷ್ಟ್ರೀಯ

ರೈಲುಗಳ ಢಿಕ್ಕಿ: ಕನಿಷ್ಠ 9 ಸಾವು

ವಾರ್ತಾ ಭಾರತಿ : 11 Jul, 2019

ಇಸ್ಲಾಮಾಬಾದ್, ಜು. 11: ಮಧ್ಯ ಪಾಕಿಸ್ತಾನದಲ್ಲಿ ಗುರುವಾರ ಎರಡು ರೈಲುಗಳು ಢಿಕ್ಕಿ ಹೊಡೆದು ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಹಾಗೂ 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಂಜಾಬ್ ರಾಜ್ಯದ ರಹೀಮ್ ಯಾರ್ ಖಾನ್ ಜಿಲ್ಲೆಯಲ್ಲಿ ಲಾಹೋರ್‌ನಿಂದ ಬರುತ್ತಿದ್ದ ಪ್ರಯಾಣಿಕ ರೈಲೊಂದು ಕ್ರಾಸಿಂಗ್ ಒಂದರಲ್ಲಿ ನಿಂತಿದ್ದ ಗೂಡ್ಸ್ ರೈಲೊಂದಕ್ಕೆ ಢಿಕ್ಕಿ ಹೊಡೆದಿದೆ.

‘‘ಕನಿಷ್ಠ ಒಂಬತ್ತು ಮೃತದೇಹಗಳನ್ನು ಪಡೆಯಲಾಗಿದೆ’’ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ‘ಜಿಯೋ ನ್ಯೂಸ್’ ಟಿವಿ ಚಾನೆಲ್‌ಗೆ ತಿಳಿಸಿದರು. ಅಪಘಾತದಲ್ಲಿ 66 ಪ್ರಯಾಣಿಕರು ಗಾಯಗೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)