varthabharthi

ರಾಷ್ಟ್ರೀಯ

ಕಾಂಗ್ರೆಸ್‌ನ ಮಾಧ್ಯಮ ಸಂಯೋಜಕ ಹುದ್ದೆಗೆ ರಚಿತ್ ಸೇಥ್ ರಾಜೀನಾಮೆ

ವಾರ್ತಾ ಭಾರತಿ : 11 Jul, 2019

ಹೊಸದಿಲ್ಲಿ, ಜು. 11: ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ ಮುಂದುವರಿದಿದೆ. ಕಾಂಗ್ರೆಸ್‌ನ ರಾಷ್ಟ್ರೀಯ ಮಾಧ್ಯಮ ಸಂಯೋಜಕ ರಚಿತ್ ಸೇಥ್ ಗುರುವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ರಾಹುವ್ ಗಾಂಧಿ ಅವರು ರಾಜೀನಾಮೆ ನೀಡಿದ ಬಳಿಕ ಯಾವುದೇ ಹುದ್ದೆಯಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ ಎಂದು ಸೇಥ್ ಹೇಳಿದ್ದಾರೆ. ಈ ಹಿಂದೆ ಸೇಥ್, ‘‘45 ದಿನಗಳು ಕಳೆದಿವೆ. ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಊಹಾಪೋಹದ ಸುದ್ದಿಗಳನ್ನು ಹೊರತುಪಡಿಸಿದರೆ, ಕಾಂಗ್ರೆಸ್‌ನಗೆ ನೂತನ ರಾಷ್ಟ್ರಧ್ಯಕ್ಷರ ನೇಮಕದ ಸೂಚನೆ ಕಾಣುತ್ತಿಲ್ಲ’’ ಎಂದು ಅವರು ಟ್ವೀಟಿಸಿದ್ದರು.

‘‘ಕರ್ನಾಟಕ ಹಾಗೂ ಗೋವಾದ ಬೆಳವಣಿಗೆಗಳ ಬಗ್ಗೆ ಬಿಜೆಪಿಯನ್ನು ದೂಷಿಸುವ ಅಗತ್ಯ ಇಲ್ಲ. ತಪ್ಪು ನಮ್ಮಲ್ಲೇ ಇದೆ’’ ಎಂದು ಅವರು ಹೇಳಿದ್ದಾರೆ. ತನ್ನ ರಾಜೀನಾಮೆ ಘೋಷಿಸಿದ ಬಳಿಕ ಸೇಥ್, ‘‘ನನ್ನ ಬದುಕು ಹಾಗೂ ರಕ್ತ ಉದಾರವಾದಿ ಹಾಗೂ ಪ್ರಗತಿಪರ ಭಾರತಕ್ಕೆ ಮೀಸಲು. ಇಂದಿರಾಗಾಂಧಿ ಅವರು ಯಾವತ್ತೂ ನನ್ನ ಸ್ಪೂರ್ತಿ’ ಎಂದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)