varthabharthi

ಕ್ರೀಡೆ

ವಿಂಬಲ್ಡನ್ ಫೈನಲ್ ತಲುಪಿದ ರೊಮಾನಿಯದ ಮೊದಲ ಅಟಗಾರ್ತಿ ಹಾಲೆಪ್

ವಾರ್ತಾ ಭಾರತಿ : 11 Jul, 2019

ಲಂಡನ್, ಜು.11: ಉಕ್ರೇನ್‌ನ ಎಲಿನಾ ಸ್ವಿಟೋಲಿನಾರನ್ನು ನೇರ ಸೆಟ್‌ಗಳಿಂದ ಸದೆ ಬಡಿದಿರುವ ಸಿಮೊನಾ ಹಾಲೆಪ್ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ ರೊಮಾನಿಯದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾದರು.

27ರ ಹರೆಯದ ಏಳನೇ ಶ್ರೇಯಾಂಕದ ಹಾಲೆಪ್ ವೃತ್ತಿಜೀವನದಲ್ಲಿ 5ನೇ ಗ್ರಾನ್‌ಸ್ಲಾಮ್ ಫೈನಲ್‌ನಲ್ಲಿ ಆಡಲಿದ್ದಾರೆ. ಹಾಲೆಪ್ 2018ರ ಫ್ರೆಂಚ್ ಓಪನ್ ಚಾಂಪಿಯನ್ ಅಗಿ ಹೊರ ಹೊಮ್ಮಿದ್ದರು. ಹಾಲೆಪ್ ಪ್ರಶಸ್ತಿ ಸುತ್ತಿನಲ್ಲಿ ಏಳು ಬಾರಿಯ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಅಥವಾ ಝೆಕ್ ಗಣರಾಜ್ಯದ ಬಾರ್ಬೊರ ಸ್ಟ್ರೈಕೋವಾರನ್ನು ಎದುರಿಸಲಿದ್ದಾರೆ. 2014ರಲ್ಲಿ ವಿಂಬಲ್ಡನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಹಾಲೆಪ್, ಎವ್‌ಜಿನಿ ಬೌಚರ್ಡ್ ವಿರುದ್ಧ ಸೋತಿದ್ದರು. ಪ್ರಸಕ್ತ ಟೂರ್ನಿಯ ಅಂತಿಮ-16ರ ಸುತ್ತಿನಲ್ಲಿ ಹಾಲೆಪ್ 15ರ ಹರೆಯದ ಆಟಗಾರ್ತಿ ಕೊಕೊ ಗೌಫ್‌ಗೆ ಸೋಲುಣಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)