varthabharthi

ನಿಮ್ಮ ಅಂಕಣ

ಆನ್‌ಲೈನ್ ವಂಚನೆ: ಜಾಗೃತಿ ಮೂಡಲಿ

ವಾರ್ತಾ ಭಾರತಿ : 12 Jul, 2019
-ಸೈಯದ್ ಅರ್ಷದ್ ಎಂ., ಶಿಗ್ಗಾಂವ

ಮಾನ್ಯರೇ,

 ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಬೆಳೆದಷ್ಟು ಅದರ ಅನುಕೂಲತೆಗಳು ಎಷ್ಟಿದೆಯೋ ಅಷ್ಟೇ ಅದರ ಅನನುಕೂಲ ಮತ್ತು ದುರುಪಯೋಗಗಳನ್ನು ನಾವು ಕಾಣಬಹುದು. ಇದೀಗ ಎಲ್ಲೆಡೆ ಆನ್‌ಲೈನ್ ವಂಚನೆ ಎಲ್ಲೆಡೆ ಸುದ್ದಿಯಾಗುತ್ತಿದೆ. ಆದರೆ ಸಾಕಷ್ಟು ಜನರಲ್ಲಿ ಆನ್‌ಲೈನ್ ವಂಚನೆಯ ಬಗ್ಗೆ ಅರಿವು ಇನ್ನೂ ಮೂಡದಿರುವುದು ವಿಷಾದನೀಯ.

ಫೋನ್ ಕರೆ ಮುಖಾಂತರ ಜನರನ್ನು ನಿಮಗೆ ಇಂತಿಷ್ಟು ಪ್ರಮಾಣದ ಬಹುಮಾನ ಲಭಿಸಿದೆ. ಆದ ಕಾರಣ ನೀವು ಅದರ ತೆರಿಗೆ ನೀಡಿ ಹಣ ಪಡೆಯಬಹುದು ಎಂದು ವಂಚಿಸಿರುವ ಸಾಕಷ್ಟು ಉದಾಹರಣೆಗಳನ್ನು ನಾವು ಕಾಣಬಹುದು. ಹಾಗೆಯೇ ಬ್ಯಾಂಕ್ ಕರೆ ಎಂದು ನಂಬಿಸಿ ಕ್ರೆಡಿಟ್ ಕಾರ್ಡ್, ಡೆಬಿಟ್‌ಕಾರ್ಡಿನ ಎಕ್ಸ್‌ಪೈರಿ ಡೇಟ್ ಮುಗಿದಿದೆ ಅದನ್ನು ನವೀಕರಿಸಬೇಕಾಗಿದೆ ಎಂದು ಹೇಳಿ ಕಾರ್ಡ್‌ದಾರನ ಕಾರ್ಡಿನ ಎಲ್ಲ ಮಾಹಿತಿಯನ್ನೂ ಪಡೆದು ಅವರ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕಾನೂನು ಬಾಹಿರ ರೀತಿಯಿಂದ ವರ್ಗಾಯಿಸಲಾಗುತ್ತದೆ.

ಇಲ್ಲಿ ನಾವು ಗಮನಿಸಬೇಕಾದ ಪ್ರಮುಖ ಅಂಶವೇನೆಂದರೆ ಯಾವುದೇ ಬ್ಯಾಂಕ್ ನಮ್ಮ ಖಾತೆಯ ವೈಯಕ್ತಿಕ ವಿಷಯಗಳ ಮಾಹಿತಿಯನ್ನು ಫೋನ್ ಕರೆಯ ಮುಖಾಂತರ ಪಡೆದುಕೊಳ್ಳುವುದಿಲ್ಲ. ಹಾಗೇನಾದರೂ ಬ್ಯಾಂಕ್ ಖಾತೆಯ ವಿವರಗಳನ್ನು ಯಾರಾದರೂ ಕೇಳಿದಾಗ ನೇರವಾಗಿ ಬ್ಯಾಂಕಿಗೆ ಹೋಗಿ ಅಥವಾ ಬ್ಯಾಂಕಿನ ಗ್ರಾಹಕರ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳುವುದರಿಂದ ನಾವು ಕಷ್ಟ ಪಟ್ಟು ಸಂಪಾದಿಸಿದ ಹಣವನ್ನು ವಂಚನೆಯಿಂದ ಕಾಪಾಡಲು ಸಾಧ್ಯ.

-ಸೈಯದ್ ಅರ್ಷದ್ ಎಂ., ಶಿಗ್ಗಾಂವ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)