varthabharthi

ನಿಮ್ಮ ಅಂಕಣ

ಪ್ರಜಾಪ್ರಭುತ್ವದ ಮೇಲೆ ಅತೃಪ್ತರ ಆಕ್ರಮಣ

ವಾರ್ತಾ ಭಾರತಿ : 12 Jul, 2019
-ಪುನೀತ್. ಎನ್., ಅಶೋಕಪುರಂ, ಮೈಸೂರು

ಮಾನ್ಯರೇ,

ಶಾಸಕಾಂಗವು ಕೇವಲ ಕಾನೂನಿನ ತಯಾರಿಕೆಯ ದೇಹವಲ್ಲ, ಆದರೆ ಕಾನೂನು ತಯಾರಿಕೆಯಲ್ಲಿನ ಶಾಸಕಾಂಗದ ಕಾರ್ಯಗಳಲ್ಲಿ ಒಂದಾಗಿದೆ. ಶಾಸಕಾಂಗವು ಪ್ರಜಾಪ್ರಭುತ್ವದ ಎಲ್ಲಾ ರಾಜಕೀಯ ಪ್ರಕ್ರಿಯೆಯ ಕೇಂದ್ರವಾಗಿದೆ. ಶಾಸಕಾಂಗದಲ್ಲಿನ ಕ್ರಮ, ನಿರ್ಗಮನ, ಪ್ರತಿಭಟನೆಗಳು, ಪ್ರದರ್ಶನ, ಒಮ್ಮತ, ಕಾಳಜಿ ಮತ್ತು ಸಹಕಾರದಿಂದ ಕೂಡಿ ಒಂದು ಬಹಳ ಮುಖ್ಯವಾದ ಪ್ರಜಾಪ್ರಭುತ್ವದ ಉದ್ದೇಶಗಳನ್ನು ನೀಡುತ್ತವೆ. ಈ ಶಾಸಕಾಂಗವು ಪ್ರತಿನಿಧಿಯನ್ನು ಜವಾಬ್ದಾರರನ್ನಾಗಿ ಮಾಡುವಲ್ಲಿ ಜನರಿಗೆ ಸಹಾಯ ಮಾಡುತ್ತದೆ. ಈ ರೀತಿಯಾಗಿ ಸಂವಿಧಾನದ ಅಡಿಯಲ್ಲಿ ನಿರ್ಮಿತವಾದ ಶಾಸಕಾಂಗಕ್ಕೆ ನಮ್ಮ ರಾಜ್ಯದಲ್ಲಿ ಅತೃಪ್ತರೆನಿಸಿದವರು ಅಧಿಕಾರದ ದಾಹಕ್ಕೆ ಬಲಿಯಾಗಿ, ಅವರ ಸ್ವಹಿತಾಸಕ್ತಿಗಾಗಿ ರಾಜೀನಾಮೆಯನ್ನು ನೀಡಿದ್ದಾರೆ.

ಮೇಲ್ನೋಟಕ್ಕೆ ನೋಡುವುದಾದರೆ ಇದು ವಿರೋಧ ಪಕ್ಷದ ಅಧಿಕಾರ ಲಾಲಸೆಯಿಂದಾಗಿ ಉಂಟಾದ ಅವ್ಯವಸ್ಥೆಯಾಗಿದೆ. ಸಮ್ಮಿಶ್ರ ಸರಕಾರದ ಶಾಸಕರನ್ನು ಸೆಳೆದು ಮುಂಬೈನ ರೆಸಾರ್ಟ್‌ನಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಕೂಡಿ ಹಾಕಿದುದರ ಹಿಂದೆ ಅಧಿಕಾರದ ಉತ್ತುಂಗತನ ಎಷ್ಟರ ಮಟ್ಟಿಗೆ ಇದೆ ಎಂಬುದು ಸಾಮಾನ್ಯ ಜನರಿಗೂ ಅರಿವಾಗುತ್ತಿದೆ. ಜನರ ತೆರಿಗೆಯಲ್ಲಿ ತಮ್ಮ ನಿತ್ಯದ ಭತ್ತೆ, ಕಾರು, ಬಂಗಲೆ ಮತ್ತು ಅಧಿಕಾರವನ್ನು ಅನುಭವಿಸುತ್ತಾ ಯಾವ ಅಭಿವೃದ್ಧಿ ಕೆಲಸವನ್ನೂ ಮಾಡದೆ, ತಾವು ಅತೃಪ್ತರೆಂದು ಬೊಬ್ಬೆ ಇಡುತ್ತಿದ್ದಾರೆ. ಹಾಗಾದರೆ, ಇವರು ಯಾವ ಆಯಾಮದಲ್ಲಿ ಅತೃಪ್ತರು? ಜನರ ತೆರಿಗೆಯಲ್ಲಿ ನಡೆಯುವ ಸರಕಾರದಲ್ಲಿ ತಮ್ಮ ವೈಯಕ್ತಿಕ ಖಜಾನೆ ತುಂಬಲಿಲ್ಲ ಎನ್ನುವುದಕ್ಕೆ ಅತೃಪ್ತರೇ? ಅಥವಾ ಜನರ ಅಭಿವೃದ್ಧಿಯ ಬದಲು ತಮ್ಮ ಹಿತಾಸಕ್ತಿಯ ಕೆಲಸ ನಡೆಯುತ್ತಿಲ್ಲ ಎಂಬುದರ ಅತೃಪ್ತಿಯೇ, ಒಟ್ಟಿನಲ್ಲಿ ನೋಡುವುದಾದರೆ ಈ ಅತೃಪ್ತರು ಹಣ ಮತ್ತು ಅಧಿಕಾರ ದಾಹದ ಅತೃಪ್ತರಾಗಿ ಜನರ ಮುಂದೆ ಬೆತ್ತಲಾಗಿ ನಿಂತಿದ್ದಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸಿ ಜನಾಭಿವೃದ್ಧಿ ಕೆಲಸ ಮಾಡಬೇಕಾದದ್ದು ಬಿಟ್ಟು ಪ್ರಜಾಪ್ರಭುತ್ವದ ಆಶಯಕ್ಕೆ ಮಾರಕವಾಗಿರುವ ಇವರಿಗೆ ಜನತೆಯೇ ಪಾಠಕಲಿಸಲಿದ್ದಾರೆ.

-ಪುನೀತ್. ಎನ್., ಅಶೋಕಪುರಂ, ಮೈಸೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)