varthabharthi

ಕರ್ನಾಟಕ

ಶಾಸಕರ ರಾಜೀನಾಮೆ ಅಂಗೀಕರಿಸದಿರಲು ಒತ್ತಾಯಿಸಿ ಮನವಿ

ವಾರ್ತಾ ಭಾರತಿ : 16 Jul, 2019

ಮಂಡ್ಯ, ಜು.16: ಕೆಲವು ಶಾಸಕರು ಸಲ್ಲಿಸಿರುವ ರಾಜೀನಾಮೆಯನ್ನು ಅಂಗೀಕರಿಸದೆ ಸಂವಿಧಾನಾತ್ಮಕ ಆಶಯಗಳ ರಕ್ಷಣೆಗೆ ಮುಂದಾಗಬೇಕು ಎಂದು ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಪದಾಧಿಕಾರಿಗಳು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಬೆಂಜಮಿನ್ ಥಾಮಸ್(ಕಿಟ್ಟಣ್ಣ), ಹೇಮಂತ್, ರಮೇಶ್, ಇತರರು, ಪಕ್ಷಾಂತರ ಕಾಯ್ದೆಯನ್ನು ಉಲ್ಲಂಘಿಸಿ ಬಿಜೆಪಿ ಆಮಿಷಕ್ಕೆ ಒಳಗಾಗಿ ರಾಜ್ಯದ ಮೈತ್ರಿ ಸರಕಾರವನ್ನು ಉರುಳಿಸುವ ಹುನ್ನಾರದಿಂದ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ರಾಜೀನಾಮೆಗಳು ರಾಜ್ಯದ ಘನತೆಗೆ ತಕ್ಕದಲ್ಲದ ಮತ್ತು ಸಂವಿಧಾನ ಬಾಹಿರವಾಗಿವೆ. ರಾಜ್ಯದಲ್ಲಿ ಅಧಿಕಾರಕ್ಕಾಗಿ ಶಾಸಕರ ವ್ಯಾಪಾರ ಮತ್ತು ಮುಂಬೈಯಲ್ಲಿ ಐಷಾರಾಮಿ ವಾಸ್ಥವ್ಯಕ್ಕೆ ಕಾರಣವಾಗಿ ರಾಜ್ಯದ ಜನರಿಂದ ದೂರವಿರುವುದು ಪ್ರಜಾತಂತ್ರ ವಿರೋಧಿ ಕ್ರಮವಾಗಿದೆ ಎಂದು ಅವರು ದೂರಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)