varthabharthi

ಅಂತಾರಾಷ್ಟ್ರೀಯ

ಬಾಂಬ್ ದಾಳಿ ಆರೋಪಿಗಳಿಗೆ ಮರಣ ದಂಡನೆಯಾಗಬೇಕು: ಶ್ರೀಲಂಕಾ ಅಧ್ಯಕ್ಷ ಒತ್ತಾಯ

ವಾರ್ತಾ ಭಾರತಿ : 17 Jul, 2019

ಕೊಲಂಬೊ, ಜು. 17: ಈಸ್ಟರ್ ರವಿವಾರ ನಡೆದ ಸರಣಿ ಬಾಂಬ್ ದಾಳಿಗಳ ಎಲ್ಲ ಬಂಧಿತ ಆರೋಪಿಗಳಿಗೆ ಮರಣ ದಂಡನೆ ವಿಧಿಸಬೇಕೆಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಒತ್ತಾಯಿಸಿದ್ದಾರೆ.

ನಾಲ್ಕು ದಶಕಗಳ ಬಳಿಕ ಮರಣ ದಂಡನೆಯನ್ನು ಜಾರಿಗೆ ತರುತ್ತಿರುವ ವಿಷಯದಲ್ಲಿ ಸರಕಾರದ ಪಾಲುದಾರ ಪಕ್ಷದೊಂದಿಗೆ ಏರ್ಪಟ್ಟಿರುವ ಭಿನ್ನಮತದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಮರಣ ದಂಡನೆಯನ್ನು ರದ್ದುಪಡಿಸಬೇಕೆಂದು ಕೋರಿ ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸಲು ಮಾಡಲಾಗುತ್ತಿರುವ ಪ್ರಯತ್ನಗಳು, 260ಕ್ಕೂ ಅಧಿಕ ಮಂದಿಯನ್ನು ಕೊಂದ ಭಯೋತ್ಪಾದಕರನ್ನು ಮರಣ ದಂಡನೆಯಿಂದ ರಕ್ಷಿಸುವ ಉದ್ದೇಶವನ್ನು ಹೊಂದಿವೆ ಎಂದು ಅವರು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)