ಕರ್ನಾಟಕ
216 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು, ಜು. 17: ಕರ್ನಾಟಕ ರಾಜ್ಯ ಪೊಲೀಸ್ ಖಾಲಿ ಇರುವ 216 ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್), ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್ಪಿ) ಹಾಗೂ ಜಿಲಾ ಶಸಸ್ತ್ರ ಮೀಸಲು ಪೊಲೀಸ್ (ಡಿಎಆರ್) ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ಈ ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪದವಿ ವಿದ್ಯಾಭ್ಯಾಸ ಪಡೆದಿರಬೇಕು. ಸಿವಿಲ್ ಪಿಎಸ್ಐ ಹುದ್ದೆಗೆ 21-28 ವರ್ಷದ ಒಳಗಿನವರು ಹಾಗೂ ಕೆಎಸ್ಆರ್ಪಿ/ಡಿಎಆರ್ ಹುದ್ದೆಗೆ 21-26 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಗಸ್ಟ್ 7. ನೋಂದಣಿ ಶುಲ್ಕ 250 ರೂಪಾಯಿ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು www.ksp.gov.in ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಸಲಹೆ ಹಾಗೂ ತರಬೇತಿಗೆ ಅಭ್ಯರ್ಥಿಗಳು ನ್ಯಾಶನಲ್ ಸೆಂಟರ್ ಫಾರ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ (ಎನ್ಸಿಆರ್ಡಿ) ಯನ್ನು ಸಂಪರ್ಕಿಸಬಹುದು. ಎನ್ಸಿಆರ್ಡಿ ಅಧಿಕಾರಿಗಳನ್ನು ದೂರವಾಣಿ ಸಂಖ್ಯೆ 080-25550256 ಅಥವಾ ವ್ಯಾಟ್ಸ್ ಆ್ಯಪ್ ಸಂಖ್ಯೆ +919448087600, +918050965035, +918618756586 ಮೂಲಕ ಸಂಪರ್ಕಿಸಬಹುದು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ