ಮೈಸೂರು ನೂತನ ಡಿಸಿಪಿಯಾಗಿ ಬಿ.ಟಿ.ಕವಿತಾ ನೇಮಕ
ಮೈಸೂರು,ಜು.17: ಮೈಸೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯಾಗಿ ಬಿ.ಟಿ.ಕವಿತಾ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ರಾಜ್ಯ ಗುಪ್ತವಾರ್ತೆ ಮೈಸೂರು ವಿಭಾಗದ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರನ್ನು ಈ ಕೂಡಲೇ ಜಾರಿಯಾಗುವಂತೆ ಸೂಚಿಸಿರುವ ಸ್ಥಳಕ್ಕೆ ವರ್ಗಾಯಿಸಿ ಸ್ಥಳ ನಿಯುಕ್ತಿಗೊಳಿಸಿ ರಾಜ್ಯಪಾಲರ ಆದೇಶದನುಸಾರ ಸರಕಾರ ಅಧೀನ ಕಾರ್ಯದರ್ಶಿ ವಿ.ಸುಶೀಲ ಆದೇಶಿಸಿದ್ದಾರೆ.
ಕಳೆದ ವರ್ಷ ಸೆಪ್ಟಂಬರ್ ನಲ್ಲಿಯೇ ಅವರನ್ನು ಮೈಸೂರು ಡಿಸಿಪಿಯಾಗಿ ವರ್ಗಾವಣೆ ಮಾಡಿ ಆದೇಶಿಸಲಾಗಿತ್ತಾದರೂ ರಾಜಕೀಯ ಒತ್ತಡದಿಂದ ಅವರನ್ನು ಮೈಸೂರು ಗುಪ್ತಚರ ಇಲಾಖೆಗೆ ಬದಲಾವಣೆ ಮಾಡಲಾಗಿತ್ತು. ಇದರ ವಿರುದ್ಧ ದಸಂಸ ಕಾರ್ಯಕರ್ತರು ಪ್ರತಿಭಟಿಸಿ ಓರ್ವ ದಲಿತ ಮಹಿಳಾ ಅಧಿಕಾರಿಯನ್ನು ಉದ್ದೇಶಪೂರ್ವಕವಾಗಿ ಬದಲಾಯಿಸಿ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದ್ದರು.
ನೂತನ ಡಿಸಿಪಿ ಕವಿತಾ ಜು.18ರ ಗುರುವಾರ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.
Next Story