ಶೂಟರ್ ಅನಿಶ್ಗೆ ಬಂಗಾರದ ಪದಕ
ಜೂನಿಯರ್ ಶೂಟಿಂಗ್ ವಿಶ್ವಕಪ್
ಹೊಸದಿಲ್ಲಿ, ಜು.17: ಜರ್ಮನಿಯಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಜೂನಿಯರ್ ಶೂಟಿಂಗ್ ವಿಶ್ವಕಪ್ನಲ್ಲಿ ಭಾರತ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಬುಧವಾರ ಅನಿಶ್ ಭನ್ವಾಲಾ 25 ಮೀ. ರ್ಯಾಪಿಡ್ ಫೈಯರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ 584 ಸ್ಕೋರ್ ಗಳಿಸಿದ್ದ ಭನ್ವಾಲಾ ಫೈನಲ್ನಲ್ಲಿ 29 ಅಂಕ ಗಳಿಸಿ ಅಗ್ರ ಸ್ಥಾನ ಪಡೆದರು.
ಫೈನಲ್ನಲ್ಲಿದ್ದ ಭಾರತ ಇನ್ನಿಬ್ಬರು ಶೂಟರ್ಗಳಾದ ಆದರ್ಶ್ ಸಿಂಗ್ 17 ಅಂಕದೊಂದಿಗೆ 4ನೇ ಸ್ಥಾನ, ಅಗ್ನೇಯ ಕೌಶಿಕ್(9 ಅಂಕ)ಆರನೇ ಸ್ಥಾನ ಪಡೆದಿದ್ದಾರೆ. ರಶ್ಯದ ಇಗೊರ್ ಇಸ್ಮಾಕೊವ್ 23 ಅಂಕ ಗಳಿಸಿ ಬೆಳ್ಳಿ ಪದಕ ಜಯಿಸಿದ್ದಾರೆ. ಜರ್ಮನಿಯ ಫ್ಲೋರಿಯಾನ್ ಪೀಟರ್(19) ಕಂಚಿಗೆ ತೃಪ್ತಿಪಟ್ಟರು.
ಭಾರತ ವಿಶ್ವಕಪ್ ಟೂರ್ನಿಯಲ್ಲಿ ಈತನಕ 2 ಚಿನ್ನ, 8 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಜಯಿಸಿದೆ.
Next Story