150 ರೌಡಿಗಳ ಪಟ್ಟಿ ತಯಾರು: ಮಂಗಳೂರು ಕಮಿಷನರ್
ರೌಡಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ನಿರ್ಧಾರ
ಮಂಗಳೂರು, ಜು.18: ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ 150 ಮಂದಿಯ ಪಟ್ಟಿಯನ್ನು ತಯಾರಿಸಲಾಗಿದ್ದು, ಇವರ ಬಗ್ಗೆ ವಿಶೇಷ ನಿಗಾಯಿಡುವಂತೆ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಸೂಚನೆ ರವಾನಿಸಿದ್ದಾರೆ.
ಪೊಲೀಸ್ ಕಮಿಷನರ್ ಅವರು ರೌಡಿಶೀಟರ್ಗಳ ಬಗ್ಗೆ ಎಲ್ಲ ಇನ್ಸ್ಪೆಕ್ಟರ್ಗಳು ತಮ್ಮ ವ್ಯಾಪ್ತಿಯಲ್ಲಿ ಮಾಹಿತಿ ಕಲೆ ಹಾಕಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿ ಠಾಣೆಯಲ್ಲಿ 10ರಷ್ಟು ಮಂದಿಯ ಪಟ್ಟಿ ಮಾಡಲಾಗಿದ್ದು, ಒಟ್ಟು 150 ಮಂದಿಯ ಪಟ್ಟಿ ತಯಾರಿಸಲಾಗಿದೆ. ಕಮಿಷನರ್ ಕಚೇರಿಯಲ್ಲಿ ಎಲ್ಲ ಸಹಾಯಕ ಪೊಲೀಸರು ಮತ್ತು ಇನ್ಸ್ಪೆಕ್ಟರ್ಗಳ ಸಭೆ ನಡೆಸಿದ ಕಮಿಷನರ್, ರೌಡಿ ಚಟುವಟಿಕೆಯಲ್ಲಿ ತೊಡಗಿರುವವರ ಮೇಲೆ ವಿಶೇಷ ನಿಗಾಯಿಡುವಂತೆ ಕಡಕ್ ಸೂಚನೆ ನೀಡಿದ್ದಾರೆ.
Next Story