varthabharthi

ರಾಷ್ಟ್ರೀಯ

ನಾನು ರಾಜಕೀಯದಲ್ಲಿ ಇರಬೇಕು ಎಂದು ನೆಲ್ಸನ್ ಮಂಡೇಲಾ ಹೇಳಿದ್ದರು: ಪ್ರಿಯಾಂಕಾ ಗಾಂಧಿ

ವಾರ್ತಾ ಭಾರತಿ : 18 Jul, 2019

ಹೊಸದಿಲ್ಲಿ, ಜು. 18: “ನೆಲ್ಸನ್ ಮಂಡೇಲಾ ಅವರು ನನ್ನ ಸ್ಫೂರ್ತಿ ಹಾಗೂ ಮಾರ್ಗದರ್ಶಿ” ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ನೆಲ್ಸನ್ ಮಂಡೇಲಾ ಅವರ 101ನೇ ಜನ್ಮದಿನವಾದ ಗುರುವಾರ ಅವರೊಂದಿಗೆ ತಾನಿರುವ ಭಾವಚಿತ್ರವನ್ನು ಪೋಸ್ಟ್ ಮಾಡಿ ಟ್ವೀಟ್ ಮಾಡುವ ಮೂಲಕ ನೆಲ್ಸನ್ ಮಂಡೇಲಾ ಅವರನ್ನು ಪ್ರಿಯಾಂಕಾ ಗಾಂಧಿ ವಾದ್ರಾ ನೆನಪಿಸಿಕೊಂಡಿದ್ದಾರೆ.

“ನೆಲ್ಸನ್ ಮಂಡೇಲಾ ಅವರು ನಾನು ರಾಜಕೀಯದಲ್ಲಿ ಇರಬೇಕು ಎಂದು ಬಹಳ ಹಿಂದೆಯೇ ಹೇಳಿದ್ದರು. ಮಂಡೇಲಾ ಅವರಂತವರನ್ನು ವ್ಯಕ್ತಿಗಳನ್ನು ಜಗತ್ತು ಇಂದು ಕಳೆದುಕೊಂಡಿದೆ” ಎಂದು ಅವರು ಹೇಳಿದರು. “ನೆಲ್ಸನ್ ಮಂಡೇಲಾ ಅವರ ಬದುಕು ಸತ್ಯ, ಪ್ರೀತಿ ಹಾಗೂ ಸ್ವಾತಂತ್ರ್ಯದ ಒಡಂಬಡಿಕೆ. ನನಗೆ, ಅವರು ಮಾವ ಆಗಿದ್ದರು. ಅವರು ಯಾವತ್ತೂ ನನಗೆ ಸ್ಫೂರ್ತಿ ಹಾಗೂ ಮಾರ್ಗದರ್ಶಕರಾಗಿರುತ್ತಾರೆ” ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)