varthabharthi

ಕ್ರೀಡೆ

ಝಿಂಬಾಬ್ವೆ ಕ್ರಿಕೆಟ್ ತಂಡವನ್ನು ಅಮಾನತುಗೊಳಿಸಿದ ಐಸಿಸಿ

ವಾರ್ತಾ ಭಾರತಿ : 19 Jul, 2019

ಲಂಡನ್, ಜು.18: ದೇಶದಲ್ಲಿ ಕ್ರೀಡೆಯಲ್ಲಿ ಆಡಳಿತದಲ್ಲಿ ಸರಕಾರದ ಹಸ್ತಕ್ಷೇಪವನ್ನು ತಡೆಯಲು ವಿಫಲವಾಗಿರುವ ಕಾರಣಕ್ಕೆ ಝಿಂಬಾಬ್ವೆ ಕ್ರಿಕೆಟ್ ತಂಡವನ್ನು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ ಗುರುವಾರ ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.

ಕ್ರಿಕೆಟ್ ಆಡಳಿತ ಮಂಡಳಿಯಲ್ಲಿ ಸರಕಾರದ ಹಸ್ತಕ್ಷೇಪವಿಲ್ಲ ಎಂದು ಸಾಬೀತುಪಡಿಸಲು ಮತ್ತು ಕ್ರಿಕೆಟ್‌ನಲ್ಲಿ ಸಂಪೂರ್ಣ ಮುಕ್ತ ಮತ್ತು ಪ್ರಜಾಸತಾತ್ಮಕ ರೀತಿಯಲ್ಲಿ ಚುನಾವಣೆ ನಡೆಸಲು ಅಗತ್ಯವಿರುವ ತಮ್ಮ ನಿಬಂಧನೆಗಳನ್ನು ಪಾಲಿಸುವಲ್ಲಿ ಸದಸ್ಯರು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಐಸಿಸಿ ಅವಿರೋಧವಾಗಿ ನಿರ್ಧರಿಸಿದೆ ಎಂದು ಮಂಡಳಿಯ ಹೇಳಿಕೆ ತಿಳಿಸಿದೆ.

ಅಮಾನತು ರದ್ದುಗೊಳ್ಳುವವರೆಗೆ ಝಿಂಬಾಬ್ವೆ ಕ್ರಿಕೆಟ್ ತಂಡಕ್ಕೆ ಐಸಿಸಿಯ ಆರ್ಥಿಕ ನೆರವು ದೊರೆಯುವುದಿಲ್ಲ ಮತ್ತು ಐಸಿಸಿ ಆಯೋಜಿಸುವ ಯಾವುದೇ ಪಂದ್ಯಾವಳಿಯಲ್ಲಿ ಅದು ಪಾಲ್ಗೊಳ್ಳುವಂತಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)