varthabharthi

ಕ್ರೀಡೆ

ಹಾಲ್ ಆಫ್ ಫೇಮ್ ಓಪನ್‌ನಿಂದ ರಾಮಕುಮಾರ್ ನಿರ್ಗಮನ

ವಾರ್ತಾ ಭಾರತಿ : 19 Jul, 2019

ನ್ಯೂಪೋರ್ಟ್(ಅಮೆರಿಕ), ಜು.18: ರಾಮಕುಮಾರ್ ರಾಮನಾಥನ್ ಎಟಿಪಿ ಹಾಲ್ ಆಫ್ ಫೇಮ್ ಓಪನ್‌ನ ಎರಡನೇ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ.

ಕಳೆದ ವರ್ಷ ಇಲ್ಲಿ ರನ್ನರ್ಸ್-ಅಪ್ ಆಗಿದ್ದ ರಾಮಕುಮಾರ್ ಪುರುಷರ ಸಿಂಗಲ್ಸ್‌ನಲ್ಲಿ ಫ್ರಾನ್ಸ್‌ನ 4ನೇ ಶ್ರೇಯಾಂಕದ ಉಗೊ ಹಂಬರ್ಟ್ ವಿರುದ್ಧ 6-7(5), 0-6 ನೇರ ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ರಾಮಕುಮಾರ್ ಎಟಿಪಿ ಸಿಂಗಲ್ಸ್ ಚಾರ್ಟ್‌ನಲ್ಲಿ ಈಗಿನ 134ನೇ ಸ್ಥಾನದಿಂದ 181ನೇ ಸ್ಥಾನಕ್ಕೆ ಜಾರುವ ಸಾಧ್ಯತೆಯಿದೆ. ಇದೇ ವೇಳೆ, ಹಿರಿಯ ಆಟಗಾರ ಲಿಯಾಂಡರ್ ಪೇಸ್ ಹಾಗೂ ಅವರ ಕಿವೀಸ್ ಜೊತೆಗಾರ ಮಾರ್ಕಸ್ ಡೇನಿಯಲ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಮೊದಲ ಸೆಟ್ ಸೋಲಿನಿಂದ ಚೇತರಿಸಿಕೊಂಡ ಪೇಸ್ ಹಾಗೂ ಡೇನಿಯಲ್ ಆಸ್ಟ್ರೇಲಿಯದ ಜೋಡಿ ಲುಕ್ ಸವಿಲ್ಲೆ ಹಾಗೂ ಮ್ಯಾಕ್ ಪರ್ಸೆಲ್‌ರನ್ನು 2-6, 6-2, 10-5 ಸೆಟ್‌ಗಳಿಂದ ಮಣಿಸಿದರು.

ಪೇಸ್ ಹಾಗೂ ಡೇನಿಯಲ್ ಮುಂದಿನ ಸುತ್ತಿನಲ್ಲಿ ಮ್ಯಾಥ್ಯೂ ಎಬ್ಡೆನ್ ಹಾಗೂ ರಾಬರ್ಟ್ ಲಿಂಡ್ಸ್‌ಟೆಡ್‌ರನ್ನು ಎದುರಿಸಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)