varthabharthi

ರಾಷ್ಟ್ರೀಯ

ಅರುಣಾಚಲಪ್ರದೇಶದಲ್ಲಿ ಹಲವೆಡೆ ಲಘು ಭೂಕಂಪ

ವಾರ್ತಾ ಭಾರತಿ : 20 Jul, 2019

ಇಟಾನಗರ, ಜು.20: ಅರುಣಾಚಲ ಪ್ರದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿದ್ದು, ಆದರೆ ಯಾವುದೇ ಸಾವು ನೋವು, ಕಟ್ಟಡ ಕುಸಿದು ಹಾನಿಯ ಬಗ್ಗೆ ವರದಿಯಾಗಿಲ್ಲ.

ಶನಿವಾರ ನಾಲ್ಕನೇ ಬಾರಿ ಭೂಕಂಪ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆ ದಾಖಲಾಗಿದೆ.  ಇಟಾನಗರ, ಗುವಾಹಟಿ, ದಿಮಾಪುರದಲ್ಲಿ ಭೂಮಿ ಕಂಪಿಸಿದೆ. ಪೂರ್ವ ಕಮೆಂಗ್ ಬಳಿ ಭೂಕಂಪನದ ಕೇಂದ್ರ  ಬಿಂದು ಗುರುತಿಸಲಾಗಿದೆ  ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)