varthabharthi

ಗಲ್ಫ್ ಸುದ್ದಿ

ಅಮೆರಿಕದ ಸಿಐಎಯ 17 ಗೂಢಚಾರರನ್ನು ಬಂಧಿಸಿದ ಇರಾನ್: ಹಲವರಿಗೆ ಗಲ್ಲು

ವಾರ್ತಾ ಭಾರತಿ : 22 Jul, 2019

ದುಬೈ, ಜು.22: ಅಮೆರಿಕದ ಸಿಐಎಗಾಗಿ ಕೆಲಸ ಮಾಡುತ್ತಿದ್ದ 17 ಗೂಢಚಾರರನ್ನು ಇರಾನ್ ಬಂಧಿಸಿದ್ದು, ಕೆಲವರಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ ಎಂದು ಇರಾನಿ ಮಾಧ್ಯಮಗಳು ವರದಿ ಮಾಡಿವೆ.

“ಬಂಧಿಸಲ್ಪಟ್ಟ ಗೂಢಾಚಾರರು ಆರ್ಥಿಕ, ಪರಮಾಣು, ಮೂಲಸೌಕರ್ಯ ಮತ್ತು ಸೈಬರ್ ಕ್ಷೇತ್ರಗಳ ಸೂಕ್ಷ್ಮ ಮತ್ತು ಖಾಸಗಿ ಸೆಕ್ಟರ್ ಗಳಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಮಾಹಿತಿಗಳನ್ನು ಕಲೆ ಹಾಕುತ್ತಿದ್ದರು” ಎಂದು ಸಚಿವಾಲಯವೊಂದರ ಪ್ರಕಟನೆ ಹೇಳಿರುವುದಾಗಿ ವರದಿ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)