varthabharthi

ಕ್ರೀಡೆ

ಪ್ರೊ ಕಬಡ್ಡಿ

ಜೈಪುರಕ್ಕೆ ಭರ್ಜರಿ ಜಯ

ವಾರ್ತಾ ಭಾರತಿ : 23 Jul, 2019

 ಹೈದರಾಬಾದ್, ಜು.22: ಪ್ರೊ ಕಬಡ್ಡಿ ಲೀಗ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಯೂ ಮುಂಬಾ ವಿರುದ್ಧ 42-23 ಅಂಕಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿ ಶುಭಾರಂಭ ಮಾಡಿತು. ಜೈಪುರ ಪರ ದೀಪಕ್ ಹೂಡಾ(11) ಗರಿಷ್ಠ ಅಂಕ ಕಲೆ ಹಾಕಿದರು. ನಿತಿನ್ ರಾವಲ್(7) ಹಾಗೂ ದೀಪಕ್ ನರ್ವಾಲ್(6)ಒಟ್ಟು 13 ಅಂಕ ಗಳಿಸಿದರು. ಮುಂಬಾ ಪರವಾಗಿ ಅಭಿಷೇಕ್ ಸಿಂಗ್ 7 ಹಾಗೂ ಲೀ ಡಾಂಗ್ 6 ಅಂಕ ಗಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)