varthabharthi

ಕ್ರೀಡೆ

ಭಾರತ ವಿರುದ್ಧ ಟಿ-20 ಸರಣಿಗೆ ಪೊಲಾರ್ಡ್, ನರೇನ್ ವಾಪಸ್

ವಾರ್ತಾ ಭಾರತಿ : 23 Jul, 2019

ಸೈಂಟ್‌ಜಾನ್ಸ್, ಜು.23: ಭಾರತ ವಿರುದ್ಧ ಮೊದಲೆರಡು ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳಿಗೆ 14 ಸದಸ್ಯರುಗಳನ್ನು ಒಳಗೊಂಡ ವೆಸ್ಟ್‌ಇಂಡೀಸ್ ತಂಡವನ್ನು ಸೋಮವಾರ(ಸ್ಥಳೀಯ ಕಾಲಮಾನ)ಪ್ರಕಟಿಸಲಾಗಿದೆ. ಕಿರೊನ್ ಪೊಲಾರ್ಡ್ ಹಾಗೂ ಸುನೀಲ್ ನರೇನ್ ವಿಂಡೀಸ್ ತಂಡಕ್ಕೆ ವಾಪಸಾಗಿದ್ದಾರೆ.

ಆ್ಯಂಡ್ರೆ ರಸೆಲ್ ಕೂಡ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆದರೆ, ಅವರು ಟಿ-20 ತಂಡವನ್ನು ಸೇರಿಕೊಳ್ಳುವ ಮೊದಲು ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಟಿ-20 ತಂಡವನ್ನು ಕಾರ್ಲೊಸ್ ಬ್ರಾತ್‌ವೇಟ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಎಡಗೈ ಆರಂಭಿಕ ಆಟಗಾರ ಜಾನ್ ಕ್ಯಾಂಪ್‌ಬೆಲ್ ಹಾಗೂ ಎಡಗೈ ಸ್ಪಿನ್ನರ್ ಖಾರಿ ಪೀರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

3 ಪಂದ್ಯಗಳ ಟಿ-20 ಸರಣಿಯು ಆಗಸ್ಟ್ 3ರಿಂದ ಆರಂಭವಾಗಲಿದೆ.

ವೆಸ್ಟ್‌ಇಂಡೀಸ್ ತಂಡ: ಜಾನ್ ಕ್ಯಾಂಪ್‌ಬೆಲ್, ಎವಿನ್ ಲೂವಿಸ್, ಶಿಮ್ರಾನ್ ಹೆಟ್ಮೆಯರ್, ನಿಕೊಲಸ್ ಪೂರನ್, ಕಿರೊನ್ ಪೊಲಾರ್ಡ್, ರೊವ್‌ಮನ್ ಪೊವೆಲ್, ಕಾರ್ಲೊಸ್ ಬ್ರಾತ್‌ವೇಟ್(ನಾಯಕ), ಕೀಮೊ ಪಾಲ್, ಸುನೀಲ್ ನರೇನ್, ಶೆಲ್ಡನ್ ಕಾಟ್ರೆಲ್, ಒಶಾನೆ ಥಾಮಸ್, ಅಂಥೋನಿ ಬ್ರಾಂಬೆಲ್, ಆ್ಯಂಡ್ರೆ ರಸೆಲ್, ಖಾರೆ ಪೀರ್.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)