varthabharthi

ಕರಾವಳಿ

ಮೂಡುಬಿದಿರೆ: ಲಾರಿ-ಬಸ್ ಮುಖಾಮುಖಿ ಢಿಕ್ಕಿ; 31 ಮಂದಿಗೆ ಗಾಯ

ವಾರ್ತಾ ಭಾರತಿ : 23 Jul, 2019

ಮೂಡುಬಿದಿರೆ: ಇಲ್ಲಿನ ಮಂಗಳೂರು ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ನಲ್ಲಿ ತೋಡಾರು ಬಳಿ ಸೋಮವಾರ ಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ ಲಾರಿ ಚಾಲಕ ಸಹಿತ 8 ಮಂದಿ ಗಂಭೀರವಾಗಿ ಗಾಯಗೊಂಡು ಒಟ್ಟು 31 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದ ತೀವ್ರತೆ ಲಾರಿ ಮತ್ತು ಬಸ್ಸಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಪೆರಾಡಿಯಿಂದ ಮೂಡುಬಿದಿರೆಯಾಗಿ ಮಂಗಳೂರಿನತ್ತ ತೆರಳುತ್ತಿದ್ದ  ಬಸ್ಸು ಮಂಗಳೂರು ಕಡೆಯಿಂದ ಮೂಡುಬಿದಿರೆಯತ್ತ ಬರುತ್ತಿದ್ದ ಸಿಮೆಂಟ್ ಲೋಡ್ ಹೇರಿಕೊಂಡಿದ್ದ ಲಾರಿ ತೋಡಾರು ಮಸೀದಿ ಬಳಿ  ಮುಖಾಮುಖಿ ಢಿಕ್ಕಿ ಹೊಡೆದಿವೆ. ಈ ತೀವ್ರತೆಗೆ ಲಾರಿ ಚಾಲಕ ಆದ್ರ ಸಾಹೇಬ್ ಗಂಭೀರವಾಗಿ ಗಾಯಗೊಂಡಿದ್ದು, ಬಸ್ ಚಾಲಕ ಅಬ್ದುಲ್ ಗಫೂರ್, ಬಸ್ಸಿನಲ್ಲಿದ್ದ ಕುಶಲ, ಸೀತಾ, ಸಿಸಿಲಿಯಾ, ಮುಸ್ತಾಫಾ, ಪ್ರಮೀಳಾ ಸಹಿತ ಒಟ್ಟು 8 ಮಂದಿ ತೀವ್ರ ಗಾಯಾಳುಗಳಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದೇ ವೇಳೆ ಬಸ್‍ನಲ್ಲಿದ್ದ 23 ಮಂದಿ ಗಾಯಾಳುಗಳಾಗಿ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪಘಾತದ ಸಂದರ್ಭ ರಸ್ತೆಯ ಎಡಭಾಗದಲ್ಲಿ ಮನೆಯೊಂದರ ಗೋಡೆಗೆ ಭಾಗಕ್ಕೆ ಲಾರಿ ಗುದ್ದಿದೆ.  ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)