varthabharthi

ನಿಧನ

ಕೊಪ್ಪ ಹನೀಫ್

ವಾರ್ತಾ ಭಾರತಿ : 24 Jul, 2019

ಕೊಪ್ಪ, ಜು.24: ಪಟ್ಟಣ ಸಮೀಪದ ಕುವೆಂಪುನಗರ ವಾಸಿ ಹನೀಫ್ (33) ಸೋಮವಾರ ಮುಂಜಾನೆ ತಮ್ಮ ಸ್ವಗೃಹದಲ್ಲಿ ವಿಧಿವಶರಾದರು.

ಕಳೆದೆರಡು ವರ್ಷದಿಂದ ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಹನೀಫ್ ಮಂಗಳೂರು, ಬೆಂಗಳೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಕೆಲತಿಂಗಳಿನಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ತಮ್ಮದೇ ಟ್ರಸ್ಟನ್ನು ರಚಿಸಿಕೊಳ್ಳುವ ಮೂಲಕ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಇವರು ತಮ್ಮ ಸಾಮಾಜಿಕ ಕಳಕಳಿಯ ವ್ಯಕ್ತಿತ್ವದಿಂದ ಅಪಾರ ಮಿತ್ರವರ್ಗವನ್ನು ಹೊಂದಿದ್ದರು.

ಮೃತರು ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳ ಸಂಸಾರವನ್ನು ಅಗಲಿದ್ದಾರೆ. ಮುಂಜಾನೆಯಿಂದಲೇ ಜನ ಜಾತಿ ಬೇಧ ಮರೆತು ನೂರಾರು ಸಂಖ್ಯೆಯಲ್ಲಿ ಮೃತರ ಅಂತಿಮ ದರ್ಶನ ಪಡೆದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)