varthabharthi

ಗಲ್ಫ್ ಸುದ್ದಿ

ಮಕ್ಕಾ: ಮದೀನ‌ದಿಂದ ಬಂದ ಹಜ್ಜಾಜಿಯರನ್ನು ಸ್ವಾಗತಿಸಿದ ಐಎಫ್ಎಫ್ ತಂಡ

ವಾರ್ತಾ ಭಾರತಿ : 28 Jul, 2019

ಮಕ್ಕಾ, ಜು. 28: ಈ ಸಾಲಿನ ಪವಿತ್ರ ಹಜ್ಜ್ ನಿರ್ವಹಿಸಲು ಮಂಗಳೂರಿನಿಂದ ಆಗಮಿಸಿದ ಹಜ್ಜ್ ತಂಡವು ಪವಿತ್ರ ಮದೀನಾ ಮುನವ್ವರದಿಂದ ಮಕ್ಕಾ ನಗರಕ್ಕೆ ಜು. 27ರಂದು ಬಂದು ತಲುಪಿದೆ.

ಈ ಸಂದರ್ಭ ಯಾತ್ರಾರ್ಥಿಗಳಿಗೆ ಇಂಡಿಯನ್ ಪೆಟರ್ನಿಟಿ ಫಾರಮ್ (ಐಎಫ್ಎಫ್) ನ ಹಜ್ಜ್ ಸ್ವಯಂ ಸೇವಕರು ಉಪ ಆಹಾರವನ್ನು ನೀಡಿ ಅತ್ಮೀಯತೆ ಯಿಂದ ಬರಮಾಡಿಕೊಂಡರು. ಇದೇ ವೇಳೆ ಹಾಜಿಗಳ ಲಗೇಜುಗಳನ್ನು ಕೊಠಡಿಗಳಿಗೆ ತಲುಪಿಸಲು ನೆರವಾದರು.

ಈ ಸಂದರ್ಭದಲ್ಲಿ ಟೀಮ್ ಇಂಚಾರ್ಜ್ ಅಸಿಸ್ಟೆಂಟ್ ಕೊರ್ಡಿನೆಟರ್ ಶಾಕೀರ್ ಹಕ್ ,ಅಬ್ಬಾಸ್ ಏಲಿಮಲೆ, ಅಝೀಝಿಯ ಇಂಚರ್ಜ್ ಪಝಲ್ ಹಾಗೂ ಹೈದಾರ್ ಹಾಗೂ ಸ್ವಯಂ ಸೇವಕರು ಉಪಚರಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)