varthabharthi

ಸಿನಿಮಾ

ಟಾಲಿವುಡ್‌ಗೆ ಶಾರುಕ್‌ ಪುತ್ರ?

ವಾರ್ತಾ ಭಾರತಿ : 28 Jul, 2019

ಶಾರುಕ್ ಖಾನ್ ಮೂರು ದಶಕಗಳ ಕಾಲ ಬಾಲಿವುಡ್ ಬಾದ್‌ಶಾಹಾ ಆಗಿ ಮೆರೆದಿದ್ದಾರೆ. ಇತ್ತೀಚಿನ ಅವರ ಕೆಲವು ಸಿನೆಮಾ ಗಳು ಬಾಕ್ಸ್ ಆಫೀಸ್‌ನಲ್ಲಿ ಅಷ್ಟೊಂದು ಯಶಸ್ವಿಯಾಗಿಲ್ಲವಾದರೂ ಶಾರುಕ್‌ಜನಪ್ರಿಯತೆಯಲ್ಲಿ ಯಾವುದೇ ಕೊರತೆ ಉಂಟಾಗಿಲ್ಲ. ಸದ್ಯ ಶಾರುಕ್ ಪುತ್ರಿ ಸುಹಾನಾ ಖಾನ್ ಮತ್ತು ಮಗ ಆರ್ಯನ್ ಖಾನ್ ಬಾಲಿವುಡ್‌ನ ನೆಕ್ಸ್‌ಟ್ ಜನರೇಶನ್ ತಾರೆಯರ ಪಟ್ಟಿಯಲ್ಲಿ ಮೊದಲಿಗರಾಗುವ ಧಾವಂತದಲ್ಲಿರುವಂತೆ ಕಾಣುತ್ತಿದೆ.

ಸದ್ಯ ಸುಹಾನಾ ಯಾವ ಸಿನೆಮಾದಲ್ಲೂ ನಟಿಸುತ್ತಿಲ್ಲವಾದರೂ ಆಕೆಯನ್ನು ತಮ್ಮ ಸಿನೆಮಾದಲ್ಲಿ ನಟಿಸುವಂತೆ ಅನೇಕ ನಿರ್ದೇಶಕ/ನಿರ್ಮಾಪಕರು ಈಗಾಗಲೇ ಕೇಳಿಕೊಂಡಿದ್ದಾರೆ ಎಂಬ ಗುಲ್ಲು ಹರಡಿದೆ. ಇನ್ನೊಂದೆಡೆ ಆರ್ಯನ್ ಖಾನ್ ಈಗಾಗಲೇ ‘ದಿ ಲಯನ್ ಕಿಂಗ್’ ಸಿನೆಮಾದ ಸಿಂಬಾ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಆದರೆ ಸದ್ಯ ಹರಡಿರುವ ಗುಲ್ಲೇನೆಂದರೆ, ತೆಲುಗು ನಿರ್ದೇಶಕ ಗುಣಶೇಖರ್ ಆರ್ಯನ್ ಖಾನ್‌ನನ್ನು ತನ್ನ ಮುಂದಿನ ಸಿನೆಮಾ ಹಿರಣ್ಯಕಶಿಪುವಿನಲ್ಲಿ ನಟಿಸುವಂತೆ ಕೇಳಿಕೊಂಡಿದ್ದಾರೆ ಎನ್ನುವುದು. ಹಿರಣ್ಯಕಶಿಪು ಸಿನೆಮಾ ಬಾಹುಬಲಿ ಫ್ರಾಂಚೈಸಿ ನಂತರದ ಅತ್ಯಂತ ದುಬಾರಿ ಮತ್ತು ದೊಡ್ಡ ಯೋಜನೆ ಎಂದು ಪರಿಗಣಿಸಲಾಗುತ್ತಿದೆ. ಈ ಸಿನೆಮಾದಲ್ಲಿ ಬಾಹುಬಲಿ ಜೋಡಿಗಳಾದ ರಾಣಾ ದಗ್ಗುಬಾಟಿ ಮತ್ತು ಪ್ರಭಾಸ್ ನಟಿಸುತ್ತಿದ್ದಾರೆ. ಇವರೊಂದಿಗೆ ಆರ್ಯನ್ ಖಾನ್‌ಗೆ ಪ್ರಮುಖ ಪಾತ್ರವೊಂದನ್ನು ನೀಡಲು ನಿರ್ದೇಶಕರು ಸಿದ್ಧತೆ ನಡೆಸಿದ್ದಾರೆ. ಈ ಚಿತ್ರದಲ್ಲಿ ತಮನ್ನಾ ಬಾಟಿಯಾ ಮತ್ತು ಅನುಷ್ಕಾ ಶೆಟ್ಟಿಯೂ ಅಭಿನಯಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ಈ ಮಾಹಿತಿಯ ಬಗ್ಗೆ ಯಾವುದೇ ಅಧಿಕೃತ ಘೋಷಣೆಯಾಗಿಲ್ಲವಾದರೂ ಇದು ನಿಜವಾದಲ್ಲಿ ಬಾಲಿವುಡ್ ಬಾದ್‌ಶಾಹನ ಪುತ್ರ ಹಿಂದಿ ಸಿನೆಮಾಕ್ಕಿಂತ ಮೊದಲು ದಕ್ಷಿಣದ ಸಿನೆಮಾದ ಮೂಲಕ ಪಾದಾರ್ಪಣೆ ಮಾಡಿದಂತಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)