varthabharthi

ಸಿನಿಮಾ

ಕುತೂಹಲ ಕೆರಳಿಸಿದ್ದ ಪಾತ್ರದಲ್ಲಿ ಈ ಬಾಲಿವುಡ್ ನಟ

‘ಕೆಜಿಎಫ್-2’ ಚಿತ್ರದ ‘ಅಧೀರ’ ಪಾತ್ರದ ಫಸ್ಟ್ ಲುಕ್ ಬಿಡುಗಡೆ

ವಾರ್ತಾ ಭಾರತಿ : 29 Jul, 2019

ಭಾರೀ ಕುತೂಹಲ ಕೆರಳಿಸಿದ್ದ ‘ಕೆಜಿಎಫ್-2’ ಚಿತ್ರದ ‘ಅಧೀರ’ ಪಾತ್ರದ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ‘ಅಧೀರ’ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸಲಿದ್ದಾರೆ ಎಂದು ಕೊನೆಗೂ ಚಿತ್ರತಂಡ ಬಹಿರಂಗಪಡಿಸಿದೆ.

ಕೆಜಿಎಫ್ ಚಾಪ್ಟರ್ 1ನಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ‘ಅಧೀರ’ ಪಾತ್ರವನ್ನು ಕೆಲ ನಿಮಿಷಗಳ ಕಾಲ ತೋರಿಸಿದ್ದರಾದರೂ ಆ ಪಾತ್ರವನ್ನು ನಿರ್ವಹಿಸುವವರು ಯಾರು ಎಂಬ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಕೆಜಿಎಫ್ ಚಾಪ್ಟರ್ 1 ಬಿಡುಗಡೆ ಸಂದರ್ಭದಲ್ಲೇ ಚಾಪ್ಟರ್ 2ನಲ್ಲಿ ಸಂಜಯ್ ದತ್ ನಟಿಸಲಿದ್ದಾರೆ ಎನ್ನಲಾಗುತ್ತಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)