varthabharthi

ಗಲ್ಫ್ ಸುದ್ದಿ

ಅನಿವಾಸಿ ಫ್ರೆಂಡ್ಸ್ ವತಿಯಿಂದ ದುಬೈಯಲ್ಲಿ ಶಟಲ್ ಪಂದ್ಯಾಟ: ಬ್ರದರ್ಸ್ ದುಬೈ ಪ್ರಥಮ

ವಾರ್ತಾ ಭಾರತಿ : 31 Jul, 2019

ದುಬೈ, ಜು.31: ಅನಿವಾಸಿ ಫ್ರೆಂಡ್ಸ್ ಆಯೋಜಿಸಿದ ಶಟಲ್ ಬ್ಯಾಡ್ಮಿಂಟನ್ ಸೀಸನ್ 1 ಪಂದ್ಯಾಟ ಕೆ.ಕೆ. ಜಬ್ಬಾರ್ ಕಲ್ಲಡ್ಕ ಹಾಗೂ ಸಯೀದ್ ಕಾಸರಗೋಡ್ ಫ್ರೆಂಡ್ಸ್ ದುಬೈ ಇದರ ಸಹಕಾರದೊಂದಿಗೆ ದುಬೈಯ ನಾದ್ ಅಲ್ ಶಿಬ ಕ್ರೀಡಾಂಗಣದಲ್ಲಿ ನಡೆಯಿತು.

ಯೂನುಸ್ ತಲಪಾಡಿ ಹಾಗೂ ರಹೀಮ್ ಕಲ್ಲಡ್ಕ ಮಾಲಕತ್ವದ ಬ್ರದರ್ಸ್ ದುಬೈ ತಂಡ ಕ್ರೀಡಾಕೂಟದಲ್ಲಿ ಪ್ರಥಮ ಬಹುಮಾನ ಗಳಿಸಿದ್ದು, 1000 ದಿರ್ಹಂ ಹಾಗೂ ಗಿಫ್ಟ್ ಪ್ಯಾಕ್ ಗೆದ್ದರು.

ಪಂದ್ಯಾಟದಲ್ಲಿ ದ್ವಿತೀಯ ಬಹುಮಾನ ಗಳಿಸಿದ ರವೂಫ್ ಕಲ್ಲಡ್ಕ ಹಾಗೂ ಶಹೀದ್ ಕಾಸರಗೋಡ್ ಮಾಲಕತ್ವದ U5 -105 ತಂಡ 500 ದಿರ್ಹಂ ಹಾಗೂ ಗಿಫ್ಟ್ ಪ್ಯಾಕ್ ಗೆದ್ದುಕೊಂಡಿತು.

ಹಲವಾರು ತಂಡಗಳು ಭಾಗವಹಿಸಿದ್ದು ಉತ್ತಮ ರೀತಿಯಲ್ಲಿ ಪಂದ್ಯಾಟ ನಡೆದವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)