varthabharthi


ಗಲ್ಫ್ ಸುದ್ದಿ

ಅಲ್ ಮದೀನಾ ಸೌದಿ ಸಮಿತಿಯಿಂದ ಅಬ್ಬಾಸ್ ಉಸ್ತಾದ್ ಅನುಸ್ಮರಣೆ

ವಾರ್ತಾ ಭಾರತಿ : 31 Jul, 2019

ದಮಾಮ್ : ನೇರ ನಡೆ ನುಡಿಯ, ನಿಷ್ಕಲಂಕ ವ್ಯಕಿತ್ವದ, ಅನಾಥರ, ದುರ್ಬಲರ ಬಾಳಿಗೆ ಬೆಳಕಾಗಿದ್ದ ಮರಹುಂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಅವರ ಮರಣ ಈ ಪ್ರಪಂಚ ಮರಣ ಎಂದು  ಅಲ್ ಮದೀನಾ ಸೌದಿ ರಾಷ್ಟ್ರೀಯ ಸಮಿತಿ ಅನುಸ್ಮ್ರರಣೆ ಸಭೆಯಲ್ಲಿ ಝೈನುಲ್ ಅಬೀದೀನ್ ಝುಹರಿ ಹೇಳಿದರು.

ದಮಾಮ್ ಹೊಲಿಡೇಸ್ ಹೋಟೆಲ್ ನಲ್ಲಿ ಅನುಸ್ಮರಣೆ ಸಭೆ ನಡೆಯಿತು. ಈ ಸಂದರ್ಭ ಅಲ್ ಕೋಬರ್ ಘಟಕದ ಸ್ಥಾಪಕಾಧ್ಯಕ್ಷ ಅಬ್ದುಲ್ಲಾ ಫೈಝಿ ಪ್ರಾರ್ಥನೆ ಮಾಡಿದರು.

ರಾಷ್ಟ್ರೀ ಯ ಸಮಿತಿ ಪ್ರ. ಕಾರ್ಯದರ್ಶಿ ಎಂ ಜಿ ಇಕ್ಬಾಲ್ ಮಲ್ಲೂರು ಸ್ವಾಗತಿಸಿದರು. ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಿಪಿ ಯೂಸುಫ್ ಸಖಾಫಿ ಬೈತಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭ ದಮಾಮ್ ಐಸಿಎಫ್ ದಾಯಿ ಝೈದ್ ಸಖಾಫಿ ಹಾಗೂ ದಮಾಮ್ ಘಟಕಾಧ್ಯಕ್ಷ ಅಝೀಝ್  ಮುಸ್ಲಿಯಾರ್ ಕುತ್ತಾರ್, ಇಕ್ಬಾಲ್ ಕೈರಂಗಳ ಮಾತನಾಡಿದರು.

ಸಭೆಯಲ್ಲಿ ಸಫ್ವಾನ್ ತಂಙಳ್, ರಾಷ್ಟ್ರೀ ಯ ಸಮಿತಿ  ಸಲಹೆಗಾರರಾದ  ಟಿ ಎಚ್ ಬಶೀರ್ ತೋಟಾಲ್, ರಾಷ್ಟ್ರೀ ಯ ಸಮಿತಿ  ಜೊತೆ ಕಾರ್ಯದರ್ಶಿ ಉಸ್ಮಾನ್ ಮಂಜನಾಡಿ, ಅಲ್  ಕೊಬಾರ್ ಘಟಾಕಾಧ್ಯಕ್ಷ ಮಹಮ್ಮದ್ ಮಳೆಬೆಟ್ಟು, ಮಾಜಿ ಅಧ್ಯಕ್ಷ ಕಾಸಿಂ ಅಡ್ಡೂರು,  ರಯಿ ಸ್ಕೊ ಚೆಯರ್ ಮ್ಯಾನ್ ಅಬೂಬಕರ್ ಉಪಸ್ಥಿತರಿದ್ದರು.

ಓರ್ಗನೈಸರ್ ಹೈದರ್ ನಹಿಮೀ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)