varthabharthi

ಸಿನಿಮಾ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಹಲವು ಪ್ರಶಸ್ತಿಗಳನ್ನು ಗೆದ್ದ ಕನ್ನಡದ ‘ನಾತಿಚರಾಮಿ’, ‘ಕೆಜಿಎಫ್’

ವಾರ್ತಾ ಭಾರತಿ : 9 Aug, 2019

ಹೊಸದಿಲ್ಲಿ, ಆ.9: 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಶುಕ್ರವಾರ ಪ್ರಕಟಿಸಲಾಗಿದ್ದು,11 ಪ್ರಶಸ್ತಿಗಳು ಕನ್ನಡದ ಮುಡಿಗೇರಿವೆ. ‘ನಾತಿಚರಾಮಿ’ ಅತ್ಯುತ್ತಮ ಕನ್ನಡ ಚಿತ್ರ ಸಹಿತ ಐದು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರೆ,ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಪ್ರಶಸ್ತಿಗಳ ಸಿಂಹಪಾಲನ್ನು ಬಾಲಿವುಡ್ ತನ್ನ ಮಡಿಲಿಗೆ ಹಾಕಿಕೊಂಡಿದೆ. ಗುಜರಾತಿ ಚಿತ್ರ ‘ಹೆಲ್ಲಾರೊ’ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ‘ಅಂಧಾಧುನ್’ಚಿತ್ರದಲ್ಲಿನ ನಟನೆಗಾಗಿ ಆಯುಷ್ಮಾನ್ ಖುರಾನಾ ಮತ್ತು ‘ಉರಿ:ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರಕ್ಕಾಗಿ ವಿಕಿ ಕೌಶಲ್ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಅತ್ಯುತ್ತಮ ನಟಿ ಪ್ರಶಸ್ತಿಯು ತೆಲುಗು ಚಿತ್ರ ‘ಮಹಾನಟಿ’ಯಲ್ಲಿ ಅಂದಿನ ತಾರೆ ಸಾವಿತ್ರಿ ಪಾತ್ರವನ್ನು ನಿರ್ವಹಿಸಿರುವ ಕೀರ್ತಿ ಸುರೇಶ್ ಅವರ ಮುಡಿಗೇರಿದೆ.

ಕನ್ನಡಕ್ಕೆ ಸಂದ ಗೌರವಗಳು

► ಅತ್ಯುತ್ತಮ ಕನ್ನಡ ಚಿತ್ರ:ನಾತಿಚರಾಮಿ

► ಅತ್ಯುತ್ತಮ ಆ್ಯಕ್ಷನ್ ಚಿತ್ರ:ಕೆಜಿಎಫ್

► ಅತ್ಯುತ್ತಮ ಮಕ್ಕಳ ಚಿತ್ರ:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

► ಅತ್ಯುತ್ತಮ ಬಾಲನಟ:ಪಿ.ವಿ.ರೋಹಿತ್(ಒಂದಲ್ಲ ಎರಡಲ್ಲ)(ಇತರ ಮೂವರೊಂದಿಗೆ ಜಂಟಿಯಾಗಿ)

► ವಿಶೇಷ ಉಲ್ಲೇಖಾರ್ಹ ಪ್ರಶಸ್ತಿ:ಶ್ರುತಿ ಹರಿಹರನ್(ನಾತಿಚರಾಮಿ)

► ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್:ಕೆಜಿಎಫ್(ತೆಲುಗು ಚಿತ್ರ ‘AWE’ಯೊಂದಿಗೆ ಜಂಟಿಯಾಗಿ)

► ಅತ್ಯುತ್ತಮ ಗೀತೆರಚನೆ:ಮಾಯಾವಿ ಮನವೆ(ನಾತಿಚರಾಮಿ)

► ಅತ್ಯುತ್ತಮ ಸಂಕಲನ:ನಾತಿಚರಾಮಿ

► ಅತ್ಯುತ್ತಮ ಹಿನ್ನೆಲೆ ಗಾಯಕಿ:ಬಿಂದು ಮಾಲಿನಿ(ಮಾಯಾವಿ ಮನವೆ-ನಾತಿಚರಾಮಿ)

► ರಾಷ್ಟ್ರೀಯ ಏಕತೆ ಕುರಿತು ಅತ್ಯುತ್ತಮ ಚಿತ್ರಕ್ಕಾಗಿ ನರ್ಗಿಸ್ ದತ್ ಪ್ರಶಸ್ತಿ:ಒಂದಲ್ಲ ಎರಡಲ್ಲ

► ಅತ್ಯುತ್ತಮ ಆರ್ಕೈವ್ಸ್ ಚಿತ್ರ ಪ್ರಶಸ್ತಿ:ಮೂಕಜ್ಜಿಯ ಕನಸುಗಳು

► ರಾಷ್ಟ್ರಮಟ್ಟದ ಇತರ ಪ್ರಶಸ್ತಿಗಳು

► ಅತ್ಯುತ್ತಮ ಚಿತ್ರ: ಹೆಲ್ಲಾರೊ(ಗುಜರಾತಿ)

► ಅತ್ಯುತ್ತಮ ನಿರ್ದೇಶಕ: ಆದಿತ್ಯ ಧರ್(ಉರಿ)

► ಅತ್ಯುತ್ತಮ ನಟಿ: ಕೀರ್ತಿ ಸುರೇಶ್(ಮಹಾನಟಿ-ತೆಲುಗು)

► ಅತ್ಯುತ್ತಮ ನಟ: ಆಯುಷ್ಮಾನ್ ಖುರಾನಾ(ಬಧಾಯಿ ಹೋ-ಹಿಂದಿ) ಮತ್ತು ವಿಕಿ ಕೌಶಲ್(ಉರಿ-ಹಿಂದಿ)

► ಅತ್ಯುತ್ತಮ ಪೋಷಕ ನಟಿ: ಸುರೇಖಾ ಸಿಕ್ರಿ(ಬಧಾಯಿ ಹೋ-ಹಿಂದಿ)

► ಅತ್ಯುತ್ತಮ ಪೋಷಕ ನಟ: ಸ್ವಾನಂದ ಕಿರ್ಕಿರೆ(ಚುಂಬಕ್-ಮರಾಠಿ)

► ಅತ್ಯುತ್ತಮ ಬಾಲನಟ: ಸಮೀಪ್ ಸಿಂಗ್(ಹರ್ಜೀತಾ-ಪಂಜಾಬಿ),ತಲ್ಹಾ ಅರ್ಷದ್ ರೆಸಿ(ಹಮೀದ್-ಉರ್ದು) ಮತ್ತು ಶ್ರೀನಿವಾಸ ಪೋಕಳೆ(ನಾಳ-ಮರಾಠಿ)

► ಅತ್ಯುತ್ತಮ ಮನೋರಂಜನಾ ಚಿತ್ರ: ಬಧಾಯಿ ಹೋ(ಹಿಂದಿ)

► ಪರಿಸರ ರಕ್ಷಣೆ ಕುರಿತು ಅತ್ಯುತ್ತಮ ಚಿತ್ರ: ಪಾನಿ(ಮರಾಠಿ)

► ಸಾಮಾಜಿಕ ವಿಷಯ ಕುರಿತು ಅತ್ಯುತ್ತಮ ಚಿತ್ರ: ಪ್ಯಾಡ್‌ಮ್ಯಾನ್(ಹಿಂದಿ)

► ಅತ್ಯುತ್ತಮ ಹಿಂದಿ ಚಿತ್ರ: ಬಧಾಯಿ ಹೋ

► ಅತ್ಯುತ್ತಮ ಉರ್ದು ಚಿತ್ರ: ಹಮೀದ್

► ಅತ್ಯುತ್ತಮ ಮರಾಠಿ ಚಿತ್ರ: ಭೋಂಗಾ

► ಅತ್ಯುತ್ತಮ ಮಲಯಾಳಂ ಚಿತ್ರ: ಸುಡಾನಿ ಫ್ರಂ ನೈಜಿರಿಯಾ

► ಅತ್ಯುತ್ತಮ ತಮಿಳು ಚಿತ್ರ: ಬಾರಂ

► ಅತ್ಯುತ್ತಮ ತೆಲುಗು ಚಿತ್ರ: ಮಹಾನಟಿ

► ಅತ್ಯುತ್ತಮ ಮೂಲ ಚಿತ್ರಕಥೆ: ರಾಹುಲ ರವೀಂದ್ರನ್(ಚಿ ಲಾ ಸೌ-ತೆಲುಗು)

► ಅತ್ಯುತ್ತಮ ಅಳವಡಿತ ಚಿತ್ರಕಥೆ: ಶ್ರೀರಾಮ ರಾಘವನ್(ಅಂಧಾಧುನ್-ಹಿಂದಿ)

► ಅತ್ಯುತ್ತಮ ನೃತ್ಯ ನಿರ್ದೇಶನ: ಘೂಮರ್(ಪದ್ಮಾವತ್-ಹಿಂದಿ)

► ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್: AWE(ತೆಲುಗು)

► ಅತ್ಯುತ್ತಮ ಸಂಗೀತ ನಿರ್ದೇಶಕ: ಸಂಜಯ ಲೀಲಾ ಬನ್ಸಾಲಿ(ಪದ್ಮಾವತ್)

► ಅತ್ಯುತ್ತಮ ಹಿನ್ನೆಲೆ ಸಂಗೀತ: ಉರಿ(ಹಿಂದಿ)

► ಅತ್ಯುತ್ತಮ ಮೇಕಪ್: AWE(ತೆಲುಗು)

► ಅತ್ಯುತ್ತಮ ಕಾಸ್ಟೂಮ್ ಡಿಸೈನ್: ಮಹಾನಟಿ(ತೆಲುಗು)

► ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಕಮ್ಮರ ಸಂಭವಂ (ಮಲಯಾಳಂ)

► ಅತ್ಯುತ್ತಮ ಸಿನೆಮಟೋಗ್ರಾಫಿ: ಓಲಾ(ಮಲಯಾಳಂ)

► ಅತ್ಯುತ್ತಮ ಸಂಭಾಷಣೆ: ತಾರೀಖ್(ಬಂಗಾಳಿ)

► ಅತ್ಯುತ್ತಮ ಹಿನ್ನೆಲೆ ಗಾಯಕ: ಅರಿಜಿತ್ ಸಿಂಗ್(ಬಿಂತೆ ದಿಲ್-ಪದ್ಮಾವತ್)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)