varthabharthi


ಸುಗ್ಗಿ

ನಮ್ಮ ನಡಿಗೆ

ವಾರ್ತಾ ಭಾರತಿ : 11 Aug, 2019
ಡಾ. ಬಿ.ಬಾಸ್ಕರ ರಾವ್

ಬೇಡ ಗಡಿಬಿಡಿ ಸ್ವಲ್ಪ ತಡಿ

ಮೊದಲು ಆಗಲಿ ಗಾಂಧಿಗೊಂದು ಗುಡಿ

ಎಂದು ಊರ ಸಂದುಗೊಂದಿನಿಂದ ಬಂದು

ಹಿಂದು ಮುಂದು ನೋಡದ ಬಂಧು ಭಗಿನಿಯರೆಲ್ಲ

ಸಾಲಾಗಿ ನಿಂದು ಚಂದಾ ಪುಸ್ತಕ ತಂದು

ಹೊರಟೇ ಬಿಟ್ಟರು ನಿಧಿ ಸಂಗ್ರಹಕೆಂದು

ಕೇರಿ ೇರಿ ಏರಿ ಇಳಿದು ಹಾರಿ ಹಾರಿ ದಾರಿ ಸರಿದು

ಬಂದು ನಿಂತರಯ್ಯ ಹತ್ತು ಸಮಸ್ತರೆದುರು

ಸಾಹುಕಾರ ಸೂ್ರಧಾರ ಸಾಲಗಾರ ಜಲಗಾರ ಜಮೀನ್ದಾರ

ಮಾಟಾರ ಮಾರಾಟಗಾರ ಗುರಿಕಾರ ಹರಿಕಾರ

ಕೊಟ್ಟರಲ್ಲ ಎಲ್ಲ ಒಂದೇ ಉತ್ತರ

ರಶೀದಿ ಮುಂದು ಮಾಡಿದವರೆಲ್ಲಾ ತತ್ತರ

ನಿನ್ನೆಯಷ್ಟೆ ಕೊಟ್ಟಾಯ್ತಲ್ಲ

ಮೋಹದಾಸನಿಗೆ ಮುಕ್ತಿಕೊಟ್ಟವನ ಗುಡಿಗೆ

ನಮ್ಮ ಉದಾರ ಕೊಡುಗೆ

ನಿಮ್ಮದೆಂಥ ಗಾಂಧಿಗುಡಿ ಶೇಂದಿ ಮಡಿ

ಇನ್ನು ಬರಬೇಡಿ ಬೇಗ ಹೊರಡಿ

ದೇಶಭಕ್ತ ಸರ್ವಶಕ್ತ ಅವ್ಯಕ್ತ ನಿಮಗೆ

ಯಾರು ಏನು ಒಂದೂ ಗೊತ್ತಿಲ್ಲ ತಮಗೆ

ಇಲ್ಲಿ ಕೇಳಿ ಕೊಂಚ ತಾಳಿ

ನಾಥೂ ಕಡೆಗೆ ನಮ್ಮ ನಡಿಗೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)