varthabharthi

ಕ್ರೀಡೆ

ಸೌರಭ್ ವರ್ಮಾ ಹೈದರಾಬಾದ್ ಓಪನ್ ಚಾಂಪಿಯನ್

ವಾರ್ತಾ ಭಾರತಿ : 11 Aug, 2019

ಹೈದರಾಬಾದ್, ಆ.11: ಹಾಲಿ ರಾಷ್ಟ್ರೀಯ ಚಾಂಪಿಯನ್ ಸೌರಭ್ ವರ್ಮಾ ಹೈದರಾಬಾದ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

 ಇಲ್ಲಿನ ಗಾಚಿಬೌಲಿ ಒಳಾಂಗಣ ಸ್ಟೇಡಿಯಂನಲ್ಲಿ ರವಿವಾರ 52 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮಧ್ಯಪ್ರದೇಶದ 26ರ ಹರೆಯದ ವರ್ಮಾ ಸಿಂಗಾಪುರದ ಲೊಹ್ ಕೀನ್ ಯಿವ್‌ರನ್ನು 21-13, 14-21 ಹಾಗೂ 21-16 ಗೇಮ್‌ಗಳ ಅಂತರದಿಂದ ಮಣಿಸಿದರು.

 ಈ ವರ್ಷದ ಮೇನಲ್ಲಿ ಸ್ಲೋವಾನಿಯ ಇಂಟರ್‌ನ್ಯಾಶನಲ್ ಪ್ರಶಸ್ತಿಯನ್ನು ಜಯಿಸಿದ್ದ ಸೌರಭ್ ವಿಶ್ವದ ನಂ.44ನೇ ಆಟಗಾರ ಕೀನ್ ಯೀವ್ ವಿರುದ್ಧ ಮೊದಲ ಗೇಮ್‌ನ್ನು 21-13 ಅಂತರದಿಂದ ಗೆದ್ದುಕೊಂಡರು. ಆದರೆ,2ನೇ ಗೇಮ್‌ನ್ನು 21-14 ಅಂತರದಿಂದ ಜಯಿಸಿದ ಕೀನ್ ಮರು ಹೋರಾಟ ನೀಡಿದರು. ಮೂರನೇ ಹಾಗೂ ಅಂತಿಮ ಗೇಮ್‌ನಲ್ಲಿ ಉಭಯ ಆಟಗಾರರ ಮಧ್ಯೆ ತೀವ್ರ ಪೈಪೋಟಿ ಕಂಡುಬಂತು. ಅಂತಿಮವಾಗಿ 21-16 ಅಂತರದಿಂದ ಜಯಿಸಿದ ಸೌರಭ್ ಪ್ರಶಸ್ತಿ ತನ್ನದಾಗಿಸಿಕೊಂಡರು.

ಸೌರಭ್ ಕಳೆದ ವರ್ಷ ಎರಡು ಸೂಪರ್-100 ಪ್ರಶಸ್ತಿಗಳಾದ ಡಚ್ ಓಪನ್ ಹಾಗೂ ರಶ್ಯ ಓಪನ್ ಪ್ರಶಸ್ತಿಯನ್ನು ಜಯಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)