varthabharthi


ಕರಾವಳಿ

ಉಳ್ಳಾಲದ ದರ್ಗಾ ಶರೀಫ್ ನಲ್ಲಿ ಬಕ್ರೀದ್ ಆಚರಣೆ

ವಾರ್ತಾ ಭಾರತಿ : 12 Aug, 2019

ಮಂಗಳೂರು, ಆ. ೧೨: ಉಳ್ಳಾಲದ ಸಯ್ಯದ್ ಮದನಿ ದರ್ಗಾ ಶರೀಫ್ ನಲ್ಲಿ ತ್ಯಾಗ ಬಲಿದಾನದ ಹಬ್ಬ  ಬಕ್ರೀದನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಶಾಸಕ ಯು.ಟಿ ಖಾದರ್ ಸೇರಿದಂತೆ ಹಲವಾರು ಭಕ್ತಾದಿಗಳು ಈದ್ ನಮಾಜ್ನಲ್ಲಿ ಪಾಲ್ಗೊಂಡರು.
ಉಳ್ಳಾಲ, ತ್ಯಾಗ ಬಲಿದಾನದ ಸಂಕೇತವಾಗಿರುವ ಈದುಲ್ ಅಝ್ಆ ಹಬ್ಬವನ್ನು ಪರಸ್ಪರ ಅರ್ಥ ಮಾಡಿಕೊಂಡು ಆಚರಿಸಬೇಕಾಗಿದೆ. ಜಾತಿ, ಧರ್ಮ ಇಲ್ಲದೇ ಪ್ರೀತಿ, ಸ್ನೇಹದಿಂದ ಎಲ್ಲಾ ವರ್ಗ ಸೇರಿ ಹಬ್ಬದ ಮಹತ್ವ ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಯು.ಟಿ ಖಾದರ್ ಹೇಳಿದರು.

ಅವರು ಈದುಲ್ ಅಝಾ ಹಬ್ಬದ ಪ್ರಯುಕ್ತ ಉಳ್ಳಾಲ ದರ್ಗ ಭೇಟಿ ನೀಡಿ ಪ್ರಾರ್ಥನೆ ಮಾಡಿದ ಬಳಿಕ ಮಾತನಾಡಿದರು.

ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮಾತನಾಡಿ, ಹಬ್ಬಗಳಿರುವುದು ಮನೋರಂಜನೆಗಾಗಿ ಅಲ್ಲ. ಈದುಲ್ ಅಝಾ ತ್ಯಾಗ ಬಲಿದಾನದ ಹಬ್ಬವಾಗಿದ್ದು ಸೌಹಾರ್ದತೆಯಿಂದ ಆಚರಿಸಬೇಕಾಗಿದೆ. ಒಗ್ಗಟ್ಟು ಪ್ರದರ್ಶಿಸಿ ದೇಶ ಅಭಿವೃದ್ಧಿ ಯ ಕೆಲಸ ನಮ್ಮಿಂದ ಆಗಬೇಕು ಎಂದರು.

ಖತೀಬರಾದ ಅಬ್ದುಲ್ ಅಝೀಝ್ ಬಾಖವಿ ಈದ್ ಖುತ್ಬಾ ಮತ್ತು ನಮಾಝ್ ನಿರ್ವಹಿಸಿದರು.

ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಉಪಾಧ್ಯಕ್ಷರಾದ ಯು.ಕೆ ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಕೋಶಾಧಿಕಾರಿ ಯು.ಕೆ ಇಲ್ಯಾಸ್, ಅಡಿಟರ್ ಯು.ಟಿ. ಇಲ್ಯಾಸ್,  ಜತೆ ಕಾರ್ಯದರ್ಶಿ ನೌಷಾದ್ ಅಲಿ, ಅಝಾದ್ ಇಸ್ಮಾಯಿಲ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ,ಅರೆಬಿಕ್ ಟ್ರಸ್ಟ್ ಜೊತೆ ಕಾರ್ಯದರ್ಶಿ ಆಸೀಫ್ ಅಬ್ದುಲ್ಲ, ಸದಸ್ಯ ರಾದ ಫಾರೂಕ್ ಉಳ್ಳಾಲ, ಮುಸ್ತಫ ಮಂಚಿಲ, ಅಯ್ಯೂಬ್ ಮಂಚಿಲ, ಮಹಮ್ಮದ್ ಅಳೇಕಲ,ಮೊಯ್ದಿನಬ್ಬ ಅಝಾದ್ ನಗರ, ಅಬೂಬಕರ್ ಅಲಿ ನಗರ, ಹಮೀದ್ ಯು.ಪಿ. ಅಳೇಕಲ,ಇಬ್ರಾಹಿಂ ಹಾಜಿ ಉಳ್ಳಾಲ ಬೈಲ್,ಹಮೀದ್ ಕೋಡಿ, ಯೂಸುಫ್, ಅದ್ದಾಮ ಮೇಲಂಗಡಿ, ಮಾಜಿ ಸದಸ್ಯ ರಾದ ಕಬೀರ್ ಚಾಯಬ್ಬ,ಆದಂ ಹಾಜಿ,ಪುರಸಭಾ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)