varthabharthi

ಕ್ರೀಡೆ

ಪ್ರೊ ಕಬಡ್ಡಿ ಲೀಗ್: ವಾರಿಯರ್ಸ್-ಟೈಟಾನ್ಸ್ ಪಂದ್ಯ ರೋಚಕ ಡ್ರಾ

ವಾರ್ತಾ ಭಾರತಿ : 12 Aug, 2019

ಅಹ್ಮದಾಬಾದ್, ಆ.12: ಪ್ರೊ ಕಬಡ್ಡಿ ಲೀಗ್‌ನಲ್ಲಿ ಸೋಮವಾರ ಬಂಗಾಳ ವಾರಿಯರ್ಸ್ ಹಾಗೂ ತೆಲುಗು ಟೈಟಾನ್ಸ್ ಮಧ್ಯೆ ನಡೆದ 38ನೇ ಲೀಗ್ ಪಂದ್ಯ 29-29 ಅಂಕಗಳ ಅಂತರದಿಂದ ರೋಚಕ ಡ್ರಾನಲ್ಲಿ ಕೊನೆಗೊಂಡಿದೆ.

ಟೈಟಾನ್ಸ್ ತಂಡ ಈ ಋತುವಿನಲ್ಲಿ ಎರಡನೇ ಬಾರಿ ಡ್ರಾ ಸಾಧಿಸಿತು.

ಪ್ರತಿ ಕ್ಷಣವೂ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಬಂಗಾಳದ ಪರ ನಬೀಬ್‌ಬಕ್ಷ್ 8 ಹಾಗೂ ಮಣಿಂದರ್ ಸಿಂಗ್ 5 ಅಂಕ ಗಳಿಸಿದರು. ಟೈಟಾನ್ಸ್ ಪರ ಸೂರಜ್ ದೇಸಾಯಿ 7 ಹಾಗೂ ಸಿದ್ದಾರ್ಥ್ ದೇಸಾಯಿ 4 ಅಂಕ ಕಲೆ ಹಾಕಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)