varthabharthi


ರಾಷ್ಟ್ರೀಯ

ಮಹಾಭಾರತವನ್ನು ಮತ್ತೊಮ್ಮೆ ಓದಿ: ರಜನೀಕಾಂತ್‌ಗೆ ಕಾಂಗ್ರೆಸ್ ಸಲಹೆ

ವಾರ್ತಾ ಭಾರತಿ : 13 Aug, 2019

ಚೆನ್ನೈ, ಆ.13: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾರನ್ನು ಭಗವಾನ್ ಕೃಷ್ಣ ಹಾಗೂ ಅರ್ಜುನನಿಗೆ ಹೋಲಿಸಿರುವ ಸೂಪರ್‌ಸ್ಟಾರ್ ರಜನೀಕಾಂತ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ತಮಿಳುನಾಡಿನ ಕಾಂಗ್ರೆಸ್, ನೀವು ಮಹಾಭಾರತವನ್ನು ಸರಿಯಾಗಿ ಓದಿ ಎಂದು ಸಲಹೆ ನೀಡಿದೆ.

ವಿಧಿ 370ನ್ನು ರದ್ದುಪಡಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ರಜನೀಕಾಂತ್ ಶ್ಲಾಘಿಸಿದ ಮರುದಿನ ಪ್ರತಿಕ್ರಿಯಿಸಿರುವ ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎಸ್. ಅಳಗಿರಿ,‘‘ರಜನೀಕಾಂತ್‌ರಿಂದ ಇಂತಹ ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಅವರು ಈ ಹೇಳಿಕೆಯ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಕೋಟ್ಯಂತರ ಜನರ ಹಕ್ಕುಗಳನ್ನು ಕಸಿದಿರುವವರು ಕೃಷ್ಣ ಹಾಗೂ ಅರ್ಜುನ ಆಗಲು ಹೇಗೆ ಸಾಧ್ಯ?ಪ್ರೀತಿಯ ರಜನೀಕಾಂತ್ ಅವರೇ, ದಯವಿಟ್ಟು ಮತ್ತೊಮ್ಮೆ ಮಹಾಭಾರತವನ್ನು ಓದಿ, ಅದನ್ನು ಸರಿಯಾಗಿ ಮತ್ತೊಮ್ಮೆ ಓದಿ’’ ಎಂದು ಅಳಗಿರಿ ಒತ್ತಾಯಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)