varthabharthi

ಕರಾವಳಿ

ಮಲ್ಪೆ ಮರೈನ್ ಫಿಶ್ ಸ್ಟೋರೇಜ್‍ನಲ್ಲಿ ಅಮೋನಿಯಾ ಸೋರಿಕೆ: 70ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥ

ವಾರ್ತಾ ಭಾರತಿ : 13 Aug, 2019

ಭಟ್ಕಳ: ಮಲ್ಪೆ ಮರೈನ್ ಫಿಶ್ ಸ್ಟೋರೇಜ್ ನಲ್ಲಿ ಅಮೋನಿಯ ಲಿಕ್ವಿಡ್ ಸೋರಿಕೆಗೊಂಡ ಪರಿಣಾಮ ಸುಮಾರು 74 ಪುರುಷ ಮತ್ತು ಮಹಿಳಾ ಕಾರ್ಮಿಕರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಕುರಿತು ಸೋಮವಾರ ವರದಿಯಾಗಿದೆ.

ಅಸ್ವಸ್ಥಗೊಂಡವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯಲ್ಲಿ ಅಸ್ವಸ್ಥರಾದ ಕಾರ್ಮಿಕರನ್ನು ಮಾಲಾಶ್ರೀ(22), ವಿನುತಾ(24), ದೀಪಾ(20), ಮಂಜುಲಾ(19), ಸವಿತಾ(23), ಭವಾನಿ(24), ವಿದ್ಯಾ(21), ನೇತ್ರಾವತಿ(23), ಅನಿತಾ(23), ಅಮೃತಾ(20), ರೇಖಾ(20), ನಾಗರತ್ನ(19), ಚೈತ್ರಾ(18), ರಾಧಾ(19), ಭಾರತಿ(21), ವಿದ್ಯಾ ಎಂ(20), ಪಲ್ಲವಿ(18), ರೇವತಿ(24), ರೇಖಾ ಕೆ(25), ಜಯಲಕ್ಷ್ಮಿ ಕೆ(23), ವೇದಾ(19), ಜ್ಯೋತಿ(19), ನಾಗರತ್ನ(19), ಸುಪ್ರೀತಾ(24), ಪೂರ್ಣಿಮಾ(19), ರೇವತಿ(24), ಸೀತಾ(26), ನಯನ(23), ರೇವತಿ(23). ಅಶ್ವಿತಾ(20), ಮಂಗಳಾ(19), ಸುಗುಣ(28), ಕಲಾವತಿ(24), ಸುಮುತ್ರ(24), ಲಕ್ಷ್ಮಿ(24), ದೀಪಾ(19), ಲೀಲಾವತಿ(29), ಶಾರದಾ(22), ಶಾರದಾ(23), ಅನಿತಾ(21), ನೇತ್ರಾ(24), ಪ್ರೀತಿ(18), ಗೌರಿ(22), ಪದ್ಮಾವತಿ(25), ಚಂದ್ರಕಲಾ(19), ಜ್ಯೋತಿ(22), ನಿವೇದಿತಾ(20), ನವೀನಾ(24), ಕಲ್ಪನಾ(24), ಶಾಲಿನಿ(18), ಭವಾನಿ ಎನ್(25), ವಿದ್ಯಾ ಬಿ(20), ನಗಿನ ಎಂ ಆರ್(23), ರಂಜಿನಿ ಜಿ(20), ಅನಿತಾ ಬಿ(25), ರೇವತಿ ಜಿ(24), ದೀಪಾ ಹೆಚ್.(24), ಮಂಗಳಾ ಬಿ(24), ನಯನಾ(24), ಸುಮಿದಾ(25), ಶ್ವೇತಾ ಎಸ್(21), ಭವಾನಿ ಎಸ್.(19), ಪೂಜಾ(21), ಗುಲಾಬಿ(26), ಮಹಾದೇವಿ(19), ದಿವ್ಯಾ(24), ನಾಗರತ್ನಾ(20) ಹಾಗೂ ಪುರುಷ ಕಾರ್ಮಿಕರಾದ ರಾಮಚಂದ್ರ (21), ಮನೀಶ್ ಚಾಂದ್(18), ಸುರೇಶ್(21), ಅನಿಲ್(22), ದೀಪಕ್ (18), ಸುಮಂತ್ (19), ರುಕ್ಷಾ(18) ಎಂದು ಗುರುತಿಸಲಾಗಿದೆ.

ಮೀನು ಸಂಸ್ಕರಣೆಗೆ ಮಂಜುಗಡ್ಡೆಯನ್ನು ಶೀತಲೀಕರಿಸಲು ಅಮೋನಿಯಾ ಲಿಕ್ವಿಡ್ ಬಳಸಲಾಗುತ್ತಿದೆ ಎಂದು ತಿಳಿದು ಬಂದಿದ್ದು, ಸೋಮವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಸೋರಿಕೆಗೊಂಡಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಎರಡು ಅಗ್ನಿಶಾಮಕ ದಳದ ತಂಡ ಆಗಮಿಸಿದ್ದು, ಅಮೋನಿಯಾ ಲಿಕ್ವಿಡ್ ನಿಯಂತ್ರಣಕ್ಕೆ ನಿರಂತರವಾಗಿ ಪ್ರಯತ್ನಿಸುತ್ತಿವೆ. ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಉಡುಪಿ ಎಸ್ಪಿ ನಿಶಾ ಜೇಮ್ಸ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಹೆಚ್ಚಿನ ಕಾರ್ಮಿಕರು ಅಪಾಯದಿಂದ ಪಾರಾಗಿದ್ದು, ಅವರು ಇಂದು ಸಂಜೆ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ವೈದ್ಯಾಧಿಕಾರಿಗಳ ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಠಾಣೆ ಕಂಡ್ಲೂರು ಪೊಲಿಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ್ ಹಾಗೂ ತಹಶೀಲ್ದಾರ್ ತಿಪ್ಪೇಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)