varthabharthi


ಕರಾವಳಿ

ಕುಂದಾಪುರ: ಕೆಥೊಲಿಕ್ ಸಭಾದಿಂದ ಬ್ರಕೀದ್ ಹಬ್ಬದ ಶುಭಾಶಯ

ವಾರ್ತಾ ಭಾರತಿ : 13 Aug, 2019

ಕುಂದಾಪುರ, ಆ.13: ಕೆಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ವತಿಯಿಂದ ಕ್ರೈಸ್ತ ಬಾಂಧವರು ಸೋಮವಾರ ಬಕ್ರೀದ್ ಹಬ್ಬದ ಪ್ರಯುಕ್ತ ಹಂಗ್ಳೂರು ಕೋಟೇಶ್ವರ ಮೊಯಿದ್ದೀನ್ ಜುಮ್ಮಾ ಮಸೀದಿಗೆ ಭೇಟಿ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಕುಂದಾಪುರ ವಲಯ ಕೆಥೊಲಿಕ್ ಸಭಾ ಅಧ್ಯಕ್ಷರಾದ ಹೆರಿಕ್ ಗೊನ್ಸಾಲ್ವಿಸ್ ಮಸೀದಿಯ ಮುಖ್ಯಸ್ಥರಿಗೆ ಹೂಗುಚ್ಛ ನೀಡುವುದರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು. ಕೆಥೊಲಿಕ್ ಸಭಾ ಕುಂದಾಪುರ ವಲಯದ ಮಾಜಿ ಅಧ್ಯಕ್ಷ ವಿನೋದ್ ಕ್ರಾಸ್ತಾ ಶುಭಹಾರೈಸಿದರು.

ಈ ವೇಳೆ ಕೆಥೊಲಿಕ್ ಸಭಾ ವಲಯ ಕಾರ್ಯದರ್ಶಿ ಲೀನಾ ತಾವ್ರೊ, ಕೋಶಾಧಿಕಾರಿ ವಿಲ್ಸನ್ ಡಿ ಆಲ್ಮೇಡಾ, ಕೇಂದ್ರಿಯ ಸಮಿತಿಯ ಉಪಾಧ್ಯಕ್ಷ ಫ್ಲೈವನ್ ಡಿಸೋಜ, ವಲಯ ರಾಜಕೀಯ ಸಂಚಾಲಕ ಆರ್ಚಿಬಾಲ್ಡ್ ಕ್ವಾಡ್ರಸ್, ವಲಯ ಉಪಾಧ್ಯಕ್ಷ ಎಲ್ಟನ್ ರೆಬೆರೋ, ವಲಯ ಸಹಸಂಚಾಲಕಿ ಪ್ರೇಮಾ ಡಿಕುನ್ಹಾ, ಸಹ ಕೋಶಾಧಿಕಾರಿ ವಿಲ್ಫ್ರೇಡ್ ಮಿನೇಜಸ್, ಮಸೀದಿ ಸಮಿತಿಯ ಅಧ್ಯಕ್ಷ ಭಾಷಾ ಸಾಹೇಬ್, ಕಾರ್ಯದರ್ಶಿ ಅಬ್ದುಲ್ ರಶೀದ್, ಎಂ.ಶಫಿ, ಹಾಝಿ ಅಬು ಶೇಖ್, ಪಿ.ಮೊಯ್ದಿನ್, ಬಾಬು ಕಲಂದರ್, ಅಶ್ರಫ್ ಯೂಸೂಫ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)