varthabharthi


ಕರಾವಳಿ

ಪಡುಬಿದ್ರಿ: ಮೀನುಗಾರಿಕೆ ವೇಳೆ ಬೃಹತ್ ಅಲೆಗೆ ಸಿಲುಕಿ ವ್ಯಕ್ತಿ ಮೃತ್ಯು

ವಾರ್ತಾ ಭಾರತಿ : 13 Aug, 2019

ಪಡುಬಿದ್ರಿ: ಸಮುದ್ರದಲ್ಲಿ ನಾಡದೋಣು ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೋರ್ವರು ಸಮುದ್ರದ ಬೃಹತ್ ಅಲೆಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಮೃತರನ್ನು ಕಾಪು ಉಳಿಯಾರಗೋಳಿಯ ಸಂಜೀವ ಕೋಟ್ಯಾನ್ (55) ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಗ್ಗೆ ಮಲ್ಪೆಯಿಂದ ಪಡುಬಿದ್ರಿ ಹೆಜಮಾಡಿಗೆ ಕಾತ್ಯಾಯಿನಿ ನಾಡದೋಣಿಯಲ್ಲಿ ಮೂಲಕ ಅರಬೀ ಸಮುದ್ರದಲ್ಲಿ ನಾಡದೋಣಿಯಲ್ಲಿ ಇತರರೊಂದಿಗೆ  ಸಂಜೀವ ಕೋಟ್ಯಾನ್ ತೆರಳಿದ್ದರು. ಮೀನಿನ ಬಲೆಯನ್ನು ಎಳೆಯುತ್ತಿದ್ದಾಗ ಆಕಸ್ಮಿಕವಾಗಿ  ಆಯತಪ್ಪಿ ಕಡಲಿಗೆ ಬಿದ್ದಿದ್ದರು. ಪಡುಬಿದ್ರಿ ಕಡಲ ಕಿನಾರೆಯಿಂದ 2 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ. ಅಲೆಗೆ ಸಿಲುಕಿ ಸಮುದ್ರಕ್ಕೆ ಬಿದ್ದವರನ್ನು ನಾಡದೋಣಿಯಲ್ಲಿದ್ದವರು ಮೇಲಕ್ಕೆತ್ತಿ ಉಪಚರಿಸಿದರು. ಚಿಕಿತ್ಸೆಗಾಗಿ ಉಡುಪಿಯ ಸರಕಾರಿ ಅಜ್ಜರಕಾಡು ಆಸ್ಪತ್ರೆಗೆ ಕೊಂಡೊಯ್ದರು. ಆದರೆ ಈ ವೇಳೆ ಸಂಜೀವ ಕೋಟ್ಯಾನ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)