varthabharthi


ಕರಾವಳಿ

ಆ. 26ರವರೆಗೆ ಈ ವಿಶೇಷ ಮೇಳ

ಮಂಗಳೂರು: ಇನ್‍ಲ್ಯಾಂಡ್ ಪ್ರಾಪರ್ಟಿ ಮೇಳಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ

ವಾರ್ತಾ ಭಾರತಿ : 13 Aug, 2019

ಮಂಗಳೂರು, ಆ. 13: ಕರಾವಳಿಯ ಪ್ರತಿಷ್ಠಿತ ಗೃಹ ನಿರ್ಮಾಣ ಸಂಸ್ಥೆಯಲ್ಲೊಂದಾದ ಇನ್‍ಲ್ಯಾಂಡ್ ಬಿಲ್ಡರ್ಸ್ ನಡೆಸುತ್ತಿರುವ ಎರಡನೇ ಆವೃತ್ತಿಯ 19 ದಿನಗಳ ಪ್ರಾಪರ್ಟಿ ಮೇಳವು ಉತ್ತಮ ಯಶಸ್ವಿನತ್ತ ಸಾಗಿದೆ.

ಕೊಡಿಯಾಲ್‍ಬೈಲ್‍ನ ನವ ಭಾರತ್ ಸರ್ಕಲ್ ಬಳಿಯ ಇನ್‍ಲ್ಯಾಂಡ್ ಆರ್ನೆಟ್‍ನ ಮೂರನೇ ಮಹಡಿಯಲ್ಲಿನ ತನ್ನ ಕಚೇರಿಯ ಆವರಣದಲ್ಲಿ ಆಯೋಜಿಸಿರುವ ಪ್ರಾಪರ್ಟಿ ಮೇಳವು ಬೃಹತ್ ಸಂಖ್ಯೆಯಲ್ಲಿ ಗ್ರಾಹಕರನ್ನು ಆರ್ಕಷಿಸುತ್ತಿದೆ. ಆ. 8 ರಿಂದ ಪ್ರಾರಂಭಗೊಂಡಿರುವ ಈ ಮೇಳ ಆ. 26ರಂದು ಸಮಾಪನಗೊಳ್ಳಲಿದೆ. ಇನ್‍ಲ್ಯಾಂಡ್ ಸಂಸ್ಥೆ ಕಳೆದ ವರ್ಷವೂ ಇದೇ ಮಾದರಿಯಲ್ಲಿ ಮೊದಲ ಬಾರಿಗೆ ಪ್ರಾಪರ್ಟಿ ಮೇಳವನ್ನು  ಹಮ್ಮಿಕೊಂಡಿತ್ತು.

ಕಳೆದ ವರ್ಷದಂತೆ ಈ ವರ್ಷವು ಆಷಾಡ ಮಾಸದಲ್ಲಿ ಆರಂಭಗೊಂಡ ಈ ಮೇಳವು ನಿರೀಕ್ಷೆಗೂ ಮೀರಿದ ಯಶಸ್ಸನ್ನು ಕಾಣುತ್ತಿದೆ ಎಂದು ಕಂಪನಿಯ ನಿರ್ದೇಶಕ ಮೆರಾಜ್ ಯೂಸಫ್ ತಿಳಿಸಿದ್ದಾರೆ.

ಒಬ್ಬ ಬಿಲ್ಡರ್ ಉತ್ತಮ ಗುಣಮಟ್ಟದ ವಸತಿ ಸಮುಚ್ಚಯಗಳನ್ನು ಸಮಂಜಸವಾದ ಬೆಲೆಗೆ ನೀಡಿದರೆ ಗ್ರಾಹಕರಿಂದ ಹೆಚ್ಚಿನ ಪ್ರಮಾಣದ ಬೇಡಿಕೆ ಇರುತ್ತದೆ ಎಂಬುದಕ್ಕೆ ಈ ಪ್ರಾಪರ್ಟಿ ಮೇಳ ಸಾಕ್ಷಿಯಾಗಿದೆ.  ಪರಿಪೂರ್ಣ ದಾಖಲೆಗಳನ್ನು ಹೊಂದಿರುವ ಆಧುನಿಕ ಸೌಲಭ್ಯವುಳ್ಳ  ಉತ್ತಮ ಗುಣಮಟ್ಟದ ವಸತಿ ಸಮುಚ್ಚಯಗಳನ್ನು  ಇನ್‍ಲ್ಯಾಂಡ್  ನೀಡುತ್ತಿದೆ. ತನ್ನ ಗ್ರಾಹಕರಿಗೆ ವಸತಿ ಮಾತ್ರವಲ್ಲ ಭಾಂದವ್ಯದ ಬದುಕನ್ನು ಕಟ್ಟಿ ಕೊಡುತ್ತಿದೆ.  ಕಳೆದೆರೆಡು ವರ್ಷಗಳಿಂದ ಜಿಎಸ್‍ಟಿ, ರೇರಾ ಹಾಗೂ ಷೇರು ಮಾರುಕಟ್ಟೆಯ ಏರಿಳಿತಗಳಿಂದ ರಿಯಲ್ ಎಸ್ಟೇಟ್ ಉದ್ಯಮವು ಮಂದಗತಿಯಲ್ಲಿ ಸಾಗುತ್ತಿದ್ದು, ಇದನ್ನು ಮನಗಂಡ ಇನ್‍ಲ್ಯಾಂಡ್ ಸಂಸ್ಥೆಯು ತನ್ನ ಗ್ರಾಹಕರಿಗಾಗಿ ಪ್ರಾಪರ್ಟಿ ಮೇಳದಂತಹ ಉತ್ತಮ ವೇದಿಕೆಯನ್ನು ನಿರ್ಮಿಸಿದೆ. 19 ದಿನಗಳ ಈ ಮೇಳದಲ್ಲಿ ಮನೆ ಖರೀದಿಸಲು ಬಯಸುವವರು ಹಾಗೂ ಹೂಡಿಕೆದಾರರಿಗೆ ನಮ್ಮ ವಸತಿ ಸಮುಚ್ಚಯಗಳ ಬಗ್ಗೆ,  ಮರು ಮಾರಾಟಕ್ಕೆ ಸುಲಭ ಹಾಗೂ ಹೂಡಿಕೆಯ ಮೇಲೆ ಸೂಕ್ತ ಪ್ರತಿಫಲವನ್ನು ನೀಡುವ ಯೋಜನೆಗಳ ಬಗ್ಗೆ, ಬಾಡಿಗೆ ಮನೆಗಳ ಮೂಲಕ ಆದಾಯಗಳಿಕೆ ಹಾಗೂ ವಿದೇಶದಲ್ಲಿ ವಾಸಿಸುವ ಜನರಿಗೆ ರಿಯಲ್ ಎಸ್ಟೇಟ್‍ನಲ್ಲಿ ಹೂಡಿಕೆ ಮಾಡಿ ಯಾವ ರೀತಿ ಆದಾಯವನ್ನು ಪಡೆಯಬಹುದು ಮುಂತಾದುವುಗಳ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಲಾಗುತ್ತದೆ. ನಮ್ಮ ಹಲವಾರು ಅಪಾರ್ಟ್‍ಮೆಂಟ್‍ಗಳು ಈಗಾಗಲೇ ಉತ್ತಮ ಬಾಡಿಗೆಗಳಿಸುತ್ತಿದೆ. ಉದಾ: 2ಬಿಎಚ್‍ಕೆ ಸುಮಾರು 29 ಲಕ್ಷ ರೂ. ಹೂಡಿಕೆ ಮಾಡುವ ಮೂಲಕ ಹೂಡಿಕೆದಾರರು ವರ್ಷಕ್ಕೆ 1.2 ಲಕ್ಷ ಬಾಡಿಗೆಯನ್ನು ಪಡೆಯಬಹುದು. ಬ್ಯಾಂಕ್‍ಗಳಲ್ಲಿ ಕಡಿಮೆ ಬಡ್ಡಿ ದರ ಹಾಗೂ ಅತಂತ್ರ ಷೇರು ಹೂಡಿಕೆಗಳಲ್ಲಿ ಹಣ ಇಡುತ್ತಿರುವ ವಿದೇಶಿ ಹೂಡಿಕೆದಾರರಿಗೆ ರಿಯಲ್ ಎಸ್ಟೇಟ್‍ನಲ್ಲಿ ಹಣ ವಿನಿಯೋಗಿಸಲು ಇದೊಂದು ಸುವರ್ಣಾವಕಾಶ. ನಾವು 5 ರಿಂದ 17ಲಕ್ಷ ರೂ. ರಿಯಾಯಿತಿ ನೀಡುತ್ತಿದ್ದೇವೆ. 29 ಲಕ್ಷ ರೂಪಾಯಿಗೆ 43ಲಕ್ಷ ರೂ.  ಬೆಲೆಯ 2ಬಿಎಚ್‍ಕೆ ಫ್ಲಾಟನ್ನು  ನೀಡುತ್ತಿದ್ದೇವೆಂದು ಇನ್‍ಲ್ಯಾಂಡ್‍ನ ಮಾರ್ಕೆಟಿಂಗ್ ಮ್ಯಾನೇಜರ್ ಉಲ್ಲಾಸ್ ಕದ್ರಿ ತಿಳಿಸಿದ್ದಾರೆ.

ಇನ್‍ಲ್ಯಾಂಡ್ ಸಂಸ್ಥೆಯು ಬೆಂಗಳೂರು, ಮಂಗಳೂರು, ಉಳ್ಳಾಲ ಹಾಗೂ ಪುತ್ತೂರಿನಲ್ಲಿ ವಸತಿ ಮತ್ತು ವಾಣಿಜ್ಯ ಸಮುಚ್ಚಯಗಳನ್ನು ಹೊಂದಿವೆ. ಇನ್ ಲ್ಯಾಂಡ್  ವಸತಿ ಸಮುಚ್ಚಯಗಳು ರೇರಾ ಅನುಮೋದಿತ ಯೋಜನೆಯಾಗಿದ್ದು  ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ವಸತಿ ಸಾಲ ರೂ. 2.36 ಲಕ್ಷದ ರಿಯಾಯಿತಿಯನ್ನು ಪಡೆಯಬಹುದು.  ಇನ್ ಲ್ಯಾಂಡ್ ಗುಣಮಟ್ಟದ ಪ್ರತೀಕ, ಇನ್ ಲ್ಯಾಂಡ್‍ನ ಹಲವು ವಸತಿ ಸಮುಚ್ಚಯಗಳು ರಾಜ್ಯ ಹಾಗೂ ರಾಷ್ಟೀಯ  ಪ್ರಶಸ್ತಿಗಳನ್ನು ಪಡೆದಿವೆ ಎಂದು ಹೇಳಿದರು.

ಇನ್‍ಲ್ಯಾಂಡ್ ಪ್ರಾಪರ್ಟಿ ಮೇಳಕ್ಕೆ ಗ್ರಾಹಕರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ನಮ್ಮ ಹಲವಾರು ಸಂತೃಪ್ತ ಗ್ರಾಹಕರು ಹೊಸ ಯೋಜನೆಗಳಲ್ಲಿ ಇನ್ನಷ್ಟು ಹೂಡಿಕೆಯನ್ನು ಅವಕಾಶವಾಗಿ ಬಳಸಿಕೊಳ್ಳಲು ಪ್ರಾಪರ್ಟಿ ಮೇಳಕ್ಕೆ ಭೇಟಿ ನೀಡಿದ್ದಾರೆ. ಇನ್ ಲ್ಯಾಂಡ್‍ನ ಪ್ರಮುಖ ಅಪಾರ್ಟ್‍ಮೆಂಟ್‍ಗಳಿಗೆ ಬೇಡಿಕೆಗಳು ಹೆಚ್ಚುತ್ತಿದೆ. ಹೀಗಾಗಿ ಈ ವಿಶೇಷ ರಿಯಾಯಿತಿ ಕೊಡುಗೆಯನ್ನು ತ್ವರಿತವಾಗಿ ಬಳಸಿಕೊಳ್ಳಲು ಗ್ರಾಹಕರಿಗೆ ಇದೊಂದು ಸದಾವಕಾಶ ಎಂದು ಅವರು ತಿಳಿಸಿದರು.

ಇನ್‍ಲ್ಯಾಂಡ್ ಪ್ರಾಪರ್ಟಿ ಮೇಳ ಆ. 8 ರಂದು ಇನ್‍ಲ್ಯಾಂಡ್ ಗೂಪ್‍ನ ನಿರ್ದೇಶಕ ಮೆರಾಜ್ ಯೂಸಫ್ ಉಪಸ್ಥಿತಿಯಲ್ಲಿ, ಡೈಜಿವಲ್ಡ್ ನ  ಸ್ಥಾಪಕ ಮತ್ತು ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ ಉದ್ಘಾಟಿಸಿದರು. ಕಾರ್ಪೊರೇಷನ್ ಬ್ಯಾಂಕ್‍ನ ಡಿಜಿಎಂ ಮತ್ತು ವಲಯ ಮಖ್ಯಸ್ಥ  ಜಗನ್ನಾಥ ಶೆಟ್ಟಿ, ಉದಯವಾಣಿ ಮಾರ್ಕೆಟಿಂಗ್ ಮುಖ್ಯಸ್ಥ ರಾಮಚಂದ್ರ ಮಿಜಾರ್ ಹಾಗೂ ಸುದ್ದಿ ಬಿಡುಗಡೆಯ ಮಹಮ್ಮದ್ ಮುಖ್ಯ ಅತಿಥಿಗಳಾಗಿದ್ದರು.

ಹೆಚ್ಚಿನ ಮಾಹಿತಿಗಾಗಿ 3ನೇ ಮಹಡಿ, ಇನ್‍ಲ್ಯಾಂಡ್ ಆರ್ನೆಟ್, ನವ ಭಾರತ್ ಸರ್ಕಲ್ ಇಲ್ಲಿಗೆ ಬೆಳಗ್ಗೆ 9.30 ರಿಂದ ರಾತ್ರಿ 8.30ರ ವರೆಗೆ ಭೇಟಿ ನೀಡಬಹುದು. ಮೊ. ಸಂ.: 9880138015, 9972089099, 9972014055 ಕರೆ ಮಾಡಬಹುದು, ವೆಬ್ ಸೈಟ್ www.inlandbuilders.net ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)