varthabharthi


ಕರಾವಳಿ

ಉಡುಪಿ: ಜಿಲ್ಲೆಯಲ್ಲಿ ಮನೆಗಳಿಗೆ, ಕೃಷಿ ಬೆಳೆಗೆ ಹಾನಿ

ವಾರ್ತಾ ಭಾರತಿ : 13 Aug, 2019

ಉಡುಪಿ, ಆ.13: ಆಗಾಗ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಮನೆಗಳ ಗೋಡೆ ಕುಸಿಯುವ, ಮರಗಳು ಬಿದ್ದು ಹಾನಿಗೊಳ್ಳುವ, ತೋಟಗಾರಿಕಾ ಬೆಳೆ ಹಾಗೂ ಕೃಷಿ ಬೆಳೆಗೆ ಹಾನಿಯಾಗುವ ಪ್ರಕರಣಗಳು ಇನ್ನೂ ಮುಂದುವರಿದಿದ್ದು, ಜಿಲ್ಲೆಯಲ್ಲಿ 50ಕ್ಕೂ ಅಧಿಕ ಪ್ರಕರಣಗಳು ಇಂದೂ ನಾನಾ ಕಡೆಗಳಿಂದ ವರದಿಯಾಗಿವೆ.

ಬ್ರಹ್ಮಾವರ ತಾಲೂಕು ನೀಲಾವರ ಗ್ರಾಮದ ಗಿರಿಜಾ ಆಚಾರ್ತಿ ಎಂಬವರ ಮನೆಯ ಮಾಡು ಕುಸಿದು 50,000ಕ್ಕೂ ಅಧಿಕ ನಷ್ಟವಾದ ಬಗ್ಗೆ ವರದಿಯಾಗಿದೆ ಅದೇ ರೀತಿ ನೀಲಾವರ ಗ್ರಾಮದ ಬಾವಲಿಕುದ್ರಿನ ಸಿಲ್ವಿಯಾ ಡಿಸೋಜ ಅವರ ಮನೆಗೋಡೆ ಕುಸಿದು 20ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.

ಉಳಿದಂತೆ ಉಪ್ಪೂರು ಗ್ರಾಮದ ಹಲವು ಮನೆಗಳಿಗೆ ಹಾನಿಯಾಗಿವೆ. ಮಹಾಬಲ ಮೆಂಡನ್‌ರ ಮನೆಗೆ 65,700 ರೂ., ವನಜ ಅವರ ಪಕ್ಕಾ ಮನೆಗೆ 20.300ರೂ., ನಾಗಿ ಪೂಜಾರ್ತಿ ಮನೆಗೆ 10 ಸಾವಿರ ರೂ., ಶಶಿಕಲಾ ಮನೆಗೆ 11,200ರೂ., ಮಾಧವ ಪೂಜಾರಿಯವರ ಮನೆಗೆ 24ಸಾವಿರ ರೂ., ಅಣ್ಣಯ್ಯ ಪೂಜಾರಿ ಮನೆಗೆ 6ಸಾವಿರ ರೂ., ಹಾವಂಜೆ ಗ್ರಾಮದ ಪಾರ್ವತಿ ಮನೆಗೆ 21,000ರೂ. ನಷ್ಟವಾಗಿದೆ.

ಶಾಲೆಗಳಿಗೆ ಹಾನಿ: ಬೈಂದೂರು ತಾಲೂಕಿನ ಎರಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ನಿನ್ನೆಯ ಮಳೆಯಿಂದ ಹಾನಿಯಾದ ವರದಿಗಳು ಬಂದಿವೆ. ಎಳಜಿತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಇಂದು 10 ಗಂಟೆ ಸುಮಾರಿಗೆ ಬಿರುಕು ಬಿಟ್ಟಿದ್ದು 25,000ರೂ. ಹಾಗೂ ಗೋಳಿಹೊಳೆ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಮಾಡಿನ ಪಕ್ಕಾಸಿ ಗಾಳಿಗೆ ತುಂಡಾಗಿದ್ದು 25,000ರೂ.ನಷ್ಟವಾಗಿದೆ.

ಬಡಾಕೆರೆ ನಾರಾಯಣ ರಾವ್ ಅವರ ಮನೆಯ ಕೊಟ್ಟಿಗೆಗೆ ಹಾನಿಯಾಗಿ 18ಸಾವಿರ ರೂ., ತೆಗ್ಹಗರ್ಸೆಯ ತಿಮ್ಮಪ್ಪ ಗಾಣಿಗರ ಮನೆ ಹಾಗೂ ಕೊಟ್ಟಿಗೆಗೆ ಹಾನಿಯಾಗಿದೆ. ಬಿಜೂರು ಗ್ರಾಮದ ಚಂದ್ರಕಾಂತ ನಾಯಕ್‌ರ ಮನೆಗೆ ಭಾಗಶ: ಹಾನಿಯಾಗಿ 40ಸಾವಿರ ರೂ., ನಾಡದ ಸದಾಶಿವ ಮಯ್ಯರ ಮನೆ ಮೇಲೆ ಮರಬಿದ್ದು 25ಸಾವಿರ ರೂ.ನಷ್ಟವಾಗಿದೆ.

ಉಳಿದಂತೆ ಕೆರ್ಗಾಲು ಗ್ರಾಮದ ಮುಕಾಂಬು ಮನೆಗೆ 15 ಸಾವಿರ, ಅದೇ ಗ್ರಾಮದ ಸೀತು ಮನೆಗೆ 12 ಸಾವಿರ, ಯಶೋಧ ಅವರ ಮನೆಗೆ 12 ಸಾವಿರ, ಸುಬ್ಬಿ ಅವರ ಮನೆಗೆ 12 ಸಾವಿರ, ವೆಂಕಮ್ಮ ಅವರ ಮನೆಗೆ 13ಸಾವಿರ ರೂ., ಅನಸೂಯರ ಮನೆಗೆ 12ಸಾವಿರ, ಯಡ್ತರೆ ಗ್ರಾಮದ ಗೋವಿಂದರ ಮನೆಗೆ 50ಸಾವಿರ ರೂ., ಅಣ್ಣಪ್ಪ ಪೂಜಾರಿ ಮನೆಗೆ ಒಂದು ಲಕ್ಷ ರೂ., ಬಿಜೂರು ಗ್ರಾಮದ ವೆಂಕಮ್ಮ ಪೂಜಾರ್ತಿ ಮನೆಗೆ 50 ಸಾವಿರ, ಹಾಗೂ ನಾರಾಯಣ ಶೆಟ್ಟಿ ಅವರ ಮನೆಗೆ 35 ಸಾವಿರ ರೂ. ನಷ್ಟವಾದ ಬಗ್ಗೆ ವರದಿಗಳು ಬಂದಿವೆ.

ಕಾರ್ಕಳ ತಾಲೂಕಿನ ನಿಂಜೂರಿನ ಶಾಂತಾ ಅವರ ಮನೆಗೆ 10ಸಾವಿರ, ನೂರಾಲ್‌ಬೆಟ್ಟು ವಿಶ್ವನಾಥರ ಮನೆಯ ಅಡಿಕೆ ಹಾಗೂ ತೆಂಗಿನ ಮರಗಳು ಹಾನಿಗೊಂಡು 20ಸಾವಿರ, ಬೋಳದ ರತ್ನಾವತಿ ಅವರ ಕೊಟ್ಟಿಗೆಗೆ 6ಸಾವಿರ, ಮರ್ಣೆಯ ಕೃಷ್ಣ ಅವರ ಮನೆಗೆ 15ಸಾವಿರ ನಷ್ಟವಾದ ಅದೇ ಗ್ರಾಮದ ಚಂದ್ರಯ್ಯ ಆಚಾರಿ ಅವರ 1.68 ಎಕರೆ ಭತ್ತದ ಗದ್ದೆಯ ಬೆಳೆ ನಾಶವಾಗಿ 30 ಸಾವಿರ ರೂ. ನಷ್ಟವಾಗಿದೆ.

ಕುಂದಾಪುರ ತಾಲೂಕಿನ ಕಮಲಶಿಲೆ ಗ್ರಾಮದ ಸುಮಿತ್ರಾರ ಪಕ್ಕಾ ಮನೆಗೆ 15 ಸಾವಿರ, ಸೇನಾಪುರ ಗ್ರಾಮದ ರಾಧಾರ ಮನೆಗೆ 14ಸಾವಿರ, ಕೆರಾಡಿ ಗ್ರಾಮದ ಹರ್ಷೇಂದ್ರ ನಾಯ್ಕರ ಮನೆಗೆ 50 ಸಾವಿರ, ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಕಾವೇರಿ ಮೊಗೇರ್ತಿ ಅವರ ಮನೆಗೆ 40 ಸಾವಿರ, ಗುಜ್ಜಾಡಿ ಗ್ರಾಮದ ಅಕ್ಕಮ್ಮರ ಮನೆಗೆ 50ಸಾವಿರ, ಬೆಳ್ಳಾಲ ಗ್ರಾಮದ ಗುಲಾಬಿ ಶೆಡ್ತಿ ಮನೆಯ ಕೊಟ್ಟಿಗೆಗೆ 20 ಸಾವಿರ, ಅದೇ ಗ್ರಾಮದ ಸರೋಜರ ಮನೆಗೆ 15 ಸಾವಿರ ರೂ. ಹಾಗೂ ವಜೇರ ಹೋಬಳಿ ಗ್ರಾಮದ ರಮೇಶ್ ಪೂಜಾರಿ ಮನೆಗೆ 28 ಸಾವಿರ ರೂ.ನಷ್ಟ ಸಂಭವಿಸಿದೆ.
ಅಲ್ಲದೇ ಬೈಂದೂರು ತಾಲೂಕಿನಿಂದ ಆರು ತೋಟಗಾರಿಕಾ ಬೆಳೆ ಹಾಗೂ ಭತ್ತದ ಕೃಷಿ ಬೆಳೆಗೆ ಹಾನಿಯಾದ ಪ್ರಕರಣಗಳು ವರದಿಯಾಗಿದ್ದು, 1.25 ಲಕ್ಷ ರೂ.ಮೊತ್ತದ ಕೃಷಿ ಬೆಳೆ ಹಾನಿಯಾದ ಬಗ್ಗೆಯೂ ವರದಿಗಳು ಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)