varthabharthi


ಕ್ರೀಡೆ

2ನೇ ಆ್ಯಶಸ್ ಟೆಸ್ಟ್: ಪ್ಯಾಟಿನ್ಸನ್ ಅಲಭ್ಯ

ವಾರ್ತಾ ಭಾರತಿ : 13 Aug, 2019

ಲಂಡನ್, ಆ.13: ಆಸ್ಟ್ರೇಲಿಯ ವಿರುದ್ಧ ಲಾರ್ಡ್ಸ್‌ನಲ್ಲಿ ಬುಧವಾರ ನಡೆಯಲಿರುವ ಎರಡನೇ ಆ್ಯಶಸ್ ಟೆಸ್ಟ್ ಪಂದ್ಯಕ್ಕೆ 12 ಸದಸ್ಯರ ತಂಡದಿಂದ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್‌ರನ್ನು ಕೈಬಿಡಲಾಗಿದೆ. ಜೋಶ್ ಹೇಝಲ್‌ವುಡ್ ಬದಲಿ ಆಟಗಾರನಾಗಿ ಆಡುವ ಬಳಗ ಸೇರುವ ಸಾಧ್ಯತೆಯಿದೆ.

► ‘‘ಆ್ಯಶಸ್‌ನಂತಹ ಮಹತ್ವದ ಸರಣಿಯಲ್ಲಿ ಪ್ರತಿಯೊಬ್ಬರೂ ಫಿಟ್ ಇರುವುದು ಮುಖ್ಯ. ಏಕೆಂದರೆ ಕೆಲವರು ಗಾಯಗೊಂಡರೆ ಅಥವಾ ಕೆಲವರು ಉತ್ತಮ ಪ್ರದರ್ಶನ ನೀಡದೇ ಇದ್ದರೆ, ಪರ್ಯಾಯ ಆಟಗಾರ ಸಿದ್ಧನಾಗಿರಬೇಕಾಗುತ್ತದೆ. ಆಯ್ಕೆಯ ದೃಷ್ಟಿಯಿಂದ ನಾವು ಎದುರಿಸುತ್ತಿರುವ ಉತ್ತಮ ಸಮಸ್ಯೆ ಇದಾಗಿದೆ’’ಎಂದು ರಿಚರ್ಡ್‌ಸನ್ ಹೇಳಿದ್ದಾರೆ. ಆಸ್ಟ್ರೇಲಿಯ ತಂಡ: ಡೇವಿಡ್ ವಾರ್ನರ್, ಕ್ಯಾಮರೂನ್ ಬ್ಯಾಂಕ್ರಾಫ್ಟ್,ಉಸ್ಮಾನ್ ಖ್ವಾಜಾ, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮ್ಯಾಥ್ಯೂ ವೇಡ್, ಟಿಮ್ ಪೈನ್(ನಾಯಕ, ವಿಕೆಟ್‌ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಪೀಟರ್ ಸಿಡ್ಲ್, ನಥನ್ ಲಿಯೊನ್, ಜೋಶ್ ಹೇಝಲ್‌ವುಡ್.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)