varthabharthi


ಕ್ರೀಡೆ

ಅಲ್ಪ ವಿಶ್ರಾಂತಿ ಪಡೆಯಲು ಮೊಯಿನ್ ಅಲಿ ನಿರ್ಧಾರ

ವಾರ್ತಾ ಭಾರತಿ : 13 Aug, 2019

ಲಂಡನ್, ಆ.13: ಆಸ್ಟ್ರೇಲಿಯ ವಿರುದ್ಧ ಬುಧವಾರ ನಡೆಯಲಿರುವ ಎರಡನೇ ಆ್ಯಶಸ್ ಪಂದ್ಯದಿಂದ ಹೊರಗುಳಿದಿರುವ ಇಂಗ್ಲೆಂಡ್ ಆಲ್‌ರೌಂಡರ್ ಮೊಯಿನ್ ಅಲಿ ಕ್ರಿಕೆಟ್‌ನಿಂದ ಅಲ್ಪ ವಿರಾಮ ಪಡೆಯಲು ನಿರ್ಧರಿಸಿದ್ದಾರೆ.

 32ರ ಹರೆಯದ ಅಲಿ ಎಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಆ್ಯಶಸ್ ಪಂದ್ಯದ 2 ಇನಿಂಗ್ಸ್‌ಗಳಲ್ಲಿ 0 ಹಾಗೂ 2 ರನ್ ಗಳಿಸಿದ್ದರು. ಬೌಲಿಂಗ್‌ನಲ್ಲಿ 172 ರನ್ ವೆಚ್ಚಕ್ಕೆ ಕೇವಲ 3 ವಿಕೆಟ್ ಪಡೆದಿದ್ದರು.

ಇತ್ತೀಚೆಗೆ ನಡೆದ ವಿಶ್ವಕಪ್‌ನಲ್ಲಿ ವಿಜೇತವಾಗಿರುವ ಇಂಗ್ಲೆಂಡ್ ತಂಡದ ಭಾಗವಾಗಿದ್ದ ಅಲಿ ಅವರಿಂದ ತೆರವಾದ ಸ್ಥಾನವನ್ನು ಎಡಗೈ ಸ್ಪಿನ್ನರ್ ಜಾಕ್ ಲೀಚ್ ತುಂಬಲಿದ್ದಾರೆ. ‘‘ತಮ್ಮ ಬ್ಯಾಟರಿಯನ್ನು ಚಾರ್ಜ್ ಮಾಡಲು ಅಲಿ ಕೆಲವು ಸಮಯ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಅವರ ಅವಶ್ಯವಿರುವ ಕೆಲವು ಉತ್ತಮ ಅಭ್ಯಾಸವನ್ನು ನಡೆಸಲಿದ್ದಾರೆ. ನಾವು ಅರ ನಿರ್ಧಾರಕ್ಕೆ ಸಂಪೂರ್ಣ ಗೌರವ ನೀಡುತ್ತೇವೆ’’ ಎಂದು ಅಲಿ ಅವರ ಮೊದಲ ಕೋಚ್ ಅಲೆಕ್ಸ್ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)